ಸಾಲಿಗ್ರಾಮ ವಿಪ್ರ ಮಹಿಳಾ ಬಳಗ ಇವರಿಂದ ಆಷಾಢ ಸ್ಪರ್ಧಾ ಕಾರ್ಯಕ್ರಮ ಆಯೋಜನೆ ನಡೆಯಿತು. ಸಾಂಸ್ಕೃತಿಕ  
ಜಿಲ್ಲೆ

ಆಚರಣೆಯಲ್ಲಿ ಜೀವನ ಮೌಲ್ಯ, ಆರೋಗ್ಯ ವಿಚಾರ : ಚಂದ್ರಮತಿ ತುಂಗ ಹೇಳಿಕೆ

ಕೋಟ: ಆಷಾಢದ ಆಚರಣೆಯಲ್ಲಿ ಜೀವನ ಮೌಲ್ಯ ಹಾಗೂ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಬೇಕಾಗುವ ವಿಚಾರಗಳು ಅಡಗಿದೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗೆ ಆಷಾಢ ಆಚರಣೆಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಸಾಂಸ್ಕೃತಿಕ ಚಿಂತಕಿ ಚಂದ್ರಮತಿ ತುಂಗ ಹೇಳಿದರು.

ಚಿತ್ರಪಾಡಿಯ ವನಿತಾ ಉಪಾಧ್ಯರ ಮನೆಯಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಆಶ್ರಯದಲ್ಲಿ ಆಷಾಢ ಸಂಭ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.

ವಿಪ್ರ ಮಹಿಳಾ ಬಳಗ ಸಂಚಾಲಕಿ ವನಿತಾ ಉಪಾಧ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬ್ಯಾಂಕ್ ನಿವೃತ್ತ ಅಧಿಕಾರಿ ಕೋಡಿ ಚಂದ್ರಶೇಖರ್ ನಾವಡ, ಸದಸ್ಯರಾದ ಭಾರತಿ ಮಯ್ಯ, ಸುಜಾತಾ ಬಾಯರಿ, ಶಶಿಕಲಾ, ಸ್ಮಿತಾ, ಹೇಮಾ, ಜ್ಯೋತಿ ಇದ್ದರು.