ಜಿಲ್ಲೆ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಹಾಯವಾಣಿ

ಚಿತ್ರದುರ್ಗ: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಶಿಕ್ಷಕರ ಮತದಾರರ ಸಹಾಯಕ್ಕಾಗಿ ಸಹಾಯ ವಾಣಿ ಸಂಖ್ಯೆ 08194-1950ನ್ನು ಸ್ಥಾಪಿಸಲಾಗಿದೆ. ಮೇ30ರಿಂದ ಜೂನ್ 6ರವರೆಗೆ ದಿನದ 24ಗಂಟೆ ಈ ಸಹಾಯವಾಣಿ ಕೇಂದ್ರ ಕಾರ‌್ಯನಿರ್ವಹಿಸಲಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.