ಜಿಲ್ಲೆ

ಆಗಸ್ಟ್ನಲ್ಲಿ ತಾಲೂಕು ಸಮ್ಮೇಳನ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಗಸ್ಟ್ ಮಾಸಾಂತ್ಯಕ್ಕೆ ತಾಲೂಕು ಕನ್ನಡ ಸಾಹಿತ್ಯ ೮ನೇ ಸಮ್ಮೇಳನ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ತಿಳಿಸಿದ್ದಾರೆ. ಒಂದು ದಿನದ ಸಮ್ಮೇಳನದಲ್ಲಿ ಗೋಷ್ಠಿ, ಕಲೆ, ಸಾಹಿತ್ಯ, ಸಂಗೀತ ಪರಂಪರೆ ಸ್ಮರಿಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ತಾಲೂಕು ಸಮ್ಮೇಳನಾಧ್ಯಕ್ಷರ ಬದುಕು, ಬರಹ, ಸಾಧನೆಯ ಪುಸ್ತಕ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ವಿಶ್ವನಾಥ ಯನಗುಂಟಿ, ವಿಶಾಲಾಕ್ಷಿ ಮಾಯಣ್ಣವರ, ಕುಪೇಂದ್ರ ಬರಗಾಲಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಭಾಗ್ಯಶ್ರೀ ಮರಗೋಳ, ಕವಿತಾ ಕವಳೆ ಇತರರಿದ್ದರು.