ಜಿಲ್ಲೆ

ಆಗಸ್ಟ್ ತಿಂಗಳ ಆಹಾರಧಾನ್ಯ ವಿತರಣೆ ವಿವರ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಆಗಸ್ಟ್‌ನಲ್ಲಿ ಅಂತ್ಯೋದಯ, ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಣಾ ಪ್ರಮಾಣವನ್ನು ನಿಗದಿಪಡಿಸಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರ ಒಂದರಿಂದ ಮೂವರು ಸದಸ್ಯರಿರುವ ಕುಟುಂಬಕ್ಕೆ 14 ಕೆ.ಜಿ ಅಕ್ಕಿ, 21 ಕೆ.ಜಿ ರಾಗಿ ಸೇರಿ ಒಟ್ಟು 35 ಕೆ.ಜಿ. ನಾಲ್ಕು ಸದಸ್ಯರ ಕುಟುಂಬಕ್ಕೆ 19 ಕೆ.ಜಿ. ಅಕ್ಕಿ, 21 ರಾಗಿ ಹಾಗೂ ಐದು ಸದಸ್ಯರ ಕುಟುಂಬಕ್ಕೆ 29 ಕೆ.ಜಿ. ಅಕ್ಕಿ, 21 ಕೆ.ಜಿ. ರಾಗಿ ವಿತರಣೆ ಮಾಡಲಾಗುವುದು. ಕೇಂದ್ರ ಬಿಪಿಎಲ್ ಪಡಿತರ ಚೀಟಿದಾರರಲ್ಲಿ ಒಬ್ಬ ಸದಸ್ಯ ಇದ್ದರೆ 7 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ, ಇಬ್ಬರು ಸದಸ್ಯರ ಕುಟುಂಬಕ್ಕೆ 14 ಕೆ.ಜಿ. ಅಕ್ಕಿ, 6 ಕೆ.ಜಿ. ರಾಗಿ, ಮೂವರು ಸದಸ್ಯರಿದ್ದರೆ 21 ಕೆ.ಜಿ. ಅಕ್ಕಿ, 9 ಕೆ.ಜಿ. ರಾಗಿ, ನಾಲ್ವರು ಸದಸ್ಯರ ಕುಟುಂಬಕ್ಕೆ 28 ಕೆ.ಜಿ. ಅಕ್ಕಿ 12 ಕೆ.ಜಿ. ರಾಗಿ, 5 ಸದಸ್ಯರ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ 15 ಕೆ.ಜಿ. ರಾಗಿ ವಿತರಣೆ ಮಾಡಲಾಗುತ್ತದೆ.

ರಾಜ್ಯ ಬಿಪಿಎಲ್ ಪಡಿತರ ಚೀಟಿದಾರರ ಪಟ್ಟಿಯಲ್ಲಿ ಒಬ್ಬ ಸದಸ್ಯನ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ, ಇಬ್ಬರು ಸದಸ್ಯರಿದ್ದರೆ 20 ಕೆ.ಜಿ. ಅಕ್ಕಿ, ಮೂವರು ಸದಸ್ಯರ ಕುಟುಂಬಕ್ಕೆ 30 ಕೆ.ಜಿ. ಅಕ್ಕಿ, 4 ಸದಸ್ಯರ ಕುಂಟುಂಬಕ್ಕೆ 40 ಕೆ.ಜಿ. ಅಕ್ಕಿ, ಐದು ಸದಸ್ಯರಿದ್ದರೆ 50 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ರಾಜ್ಯ ಬಿಪಿಎಲ್ (ಆದ್ಯತಾ ಪಡಿತರ) ಪಡಿತರ ಚೀಟಿಗೆ ರಾಗಿ ವಿತರಣೆ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.