ದಾವಣಗೆರೆ: ದಾವಣಗೆರೆಯಲ್ಲಿ ಕಳೆದೊಂದು ವಾರದಿಂದ ಶ್ರುತಿ ಹಿಡಿದು ಸುರಿಯುತ್ತಿದ್ದ ಮಳೆರಾಯ ಈಗ ಸ್ವಲ್ಪ ವಿಶ್ರಾಂತಿ ಪಡೆದಿದ್ದಾನೆ. ಮೂರು ದಿನದಿಂದ ಸೂರ್ಯ ಅಖಾಡಕ್ಕಿಳಿದಿದ್ದಾನೆ. ಇಬ್ಬರೂ ಒಮ್ಮೊಮ್ಮೆ ಮುಖಾಮುಖಿಯಾಗುವುದೂ ಉಂಟು!
ಬುಧವಾರ ಸಂಜೆ ಸುರಿದ ಬಿಸಿಲು ಮಳೆಯ ನಡುವೆ ಆಗಸದಲ್ಲಿ ಮೂಡಿದ ಸುಂದರ ಕಾಮನಬಿಲ್ಲು ಎಲ್ಲರ ಗಮನ ಸೆಳೆಯಿತು. ಮೋಡಗಳ ಬಾಗಿಲಿಗೆ ಬಣ್ಣಗಳ ತೋರಣಗಳನ್ನೆ ಕಮಾನು ಮಾಡಿ ಕಟ್ಟಿದಂತಿದ್ದ ಈ ಹೃದಯಂಗಮ ಚಿತ್ರವನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಚ್.ಬಿ.ಮಂಜುನಾಥ್ ಸೆರೆ ಹಿಡಿದರು.