ಚಾಮರಾಜನಗರ: ಜಿಲ್ಲೆಯ ಆಕ್ಸಿಜನ್ ಸಂತ್ರಸ್ತರಿಗೆ ಉದ್ಯೋಗ ಮತ್ತು ಪರಿಹಾರವನ್ನು ನೀಡುವ ಪ್ರಯತ್ನವಾಗಿ ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸಭೆ ನಡೆಸಿದ್ದು, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಖುದ್ದು ಹಾಜರಿದ್ದರು. ಮುಂದಿನ ಕ್ಯಾಬಿನೆಟ್‌ನಲ್ಲಿ ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರವನ್ನು ನೀಡುವ ಪ್ರಯತ್ನವಾಗಿ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಕ್ರಮವಹಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ಹಲವಾರು ಸಂಘಟನೆಗಳು ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸಭೆ ಕರೆದು, ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ದೊರಕಿಸುವ ಅಚಲ ಪ್ರಯತ್ನವನ್ನು ಕೈಗೊಂಡಿದ್ದರು. ಈ ಪ್ರಯತ್ನವೂ 4 ವರ್ಷಗಳಿಂದ ನೀಡುತ್ತಿರುವ ಭರವಸೆಯಂತಾಗದೇ, ಪ್ರಮಾಣಿಕವಾಗಿ ಆಕ್ಸಿಜನ್ ಸಂತ್ರಸ್ತರಿಗೆ ಸಕರ್ಅರಿ ಉದ್ಯೋಗ ಮತ್ತು ಪರಿಹಾರ ದೊರೆಯುವಂತಾಗಲಿ ಎಂಬುದು ಪ್ರತಿಯೊಬ್ಬರ ಆಶಯವಾಗಿದೆ. ಆಗಾಗಿ ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಹೋರಾಟಗಾರರು, ಸಂತ್ರಸ್ತರು ಮತ್ತು ಅಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
*ಯಾವ ಹಂತಕ್ಕೂ ಸಿದ್ಧರಿದ್ದೇವೆ
ಆಕ್ಸಿಜನ್ ದುರಂತದ ಸಂತ್ರಸ್ತರಿಗೆ 25 ಲಕ್ಷ ರೂ, ಪರಿಹಾರವನ್ನು ನೀಡಬೇಕು. ಸಂತ್ರಸ್ತರ ವಿದ್ಯಾರ್ಹತೆಗೆ ತಕ್ಕಂತೆ ಸಕರ್ಅರಿ ಉದ್ಯೋಗವನ್ನು ನೀಡಬೇಕು. ಕಳೆದ ಸರ್ಕಾರವನ್ನು ಬೆಟ್ಟು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನವರು, ನೊಂದವರ ಪಾಲಿಗೆ ಬೆಳಕಾಗದೇ ಸಂತ್ರಸ್ತರನ್ನು ಬೀದಿಗೆ ಬರುವಂತೆ ಮಾಡಿದೆ. ಈ ತಿಂಗಳ ಕೊನೆವರೆಗೂ ಕಾಯುತ್ತೇವೆ. ಸರ್ಕಾರಿ ಉದ್ಯೋಗದ ಭರವಸೆ ಈಡೇರದಿದ್ದರೇ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡುತ್ತೇವೆ. ಇದನ್ನು ಯಾವ ಹಂತಕ್ಕೆ ಬೇಕಾದರೂ ತೆಗೆದುಕೊಂಡು ಹೋಗಲು ಹೋರಾಟಗಾರರಾಗಿ ನಾವು ಸಿದ್ಧರಿದ್ದೇವೆ.
ನಿಜಧ್ವನಿ ಗೋವಿಂದರಾಜು, ಕನ್ನಡಪರ ಹೋರಾಟಗಾರ, ಚಾಮರಾಜನಗರ
*ಅನುಮಾನ ಕಾಡುತ್ತಿದೆ
ಬೆಂಗಳೂರಿನಲ್ಲಿ ಉಸ್ತವಾರಿ ಸಚಿವರು ಸಭೆ ಕರೆದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಮತ್ತು ಸೂಕ್ತ ಪರಿಹಾರವನ್ನು ೋಷಣೆ ಮಾಡುತ್ತಾರೆ ಎಂಬ ಅನುಮಾನವಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಸಂತ್ರಸ್ತರಿಗೆ ಉದ್ಯೋಗ ಮತ್ತು ಪರಿಹಾರವನ್ನು ೋಷಣೆ ಮಾಡಬೇಕು ಎಂದು ಸಮಾಲೋಚನೆ ಮಾಡಿಕೊಂಡಿದ್ದೇವೆ. ಇಲ್ಲವಾದರೇ ಜಿಲ್ಲಾ ಬಂದ್ ಮಾಡುತ್ತೇವೆ. ಮುಂದೆ ಮತ್ತಷ್ಟು ಹೋರಾಟವನ್ನು ರೂಪಿಸುತ್ತೇವೆ.
ಅಬ್ರಾರ್ ಅಹಮ್ಮದ್, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ, ಚಾಮರಾಜನಗರ
*ನಿರಂತರ ಹೋರಾಟದ
ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತದ ಸಂದರ್ಭದಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ನವರು, ಸಂತ್ರಸ್ತರಿಗೆ ಸಕರ್ಅರಿ ಉದ್ಯೋಗ ಮತ್ತು ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದರು. ಅದರಂತೆ 4 ವರ್ಷಗಳ ನಿರಂತರ ಹೋರಾಟದ ಲವಾಗಿ ಉಸ್ತವಾರಿ ಸಚಿವರು ಸಭೆ ಕರೆದು, ಉದ್ಯೋಗ ಮತ್ತು ಪರಿಹಾರ ನೀಡಲು ಕ್ರಮವಹಿಸಿರುವುದು ಸ್ವಾಗತಾರ್ಹ. ಸಂತ್ರಸ್ತರಿಗೆ ಸರ್ಕಾರಿ ಖಾಯಂ ಉದ್ಯೋಗವನ್ನೇ ನೀಡಬೇಕು. ಆಕ್ಸಿಜನ್ ದುರಂತದಲ್ಲಿ ಕೆಲವರನ್ನು ಕೈಬಿಟ್ಟಿದ್ದು, ಅವರನ್ನು ಪರಿಗಣಿಸಬೇಕು ಎಂದು ಒತ್ತಾಯಿಸುತ್ತೇನೆ.
ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯಾಧ್ಯಕ್ಷ, ಕಬ್ಬುಬೆಳೆಗಾರರ ಸಂಘ, ಚಾಮರಾಜನಗರ
*ನ್ಯಾಯ ದೊರೆಯುವ ನಿರೀಕ್ಷೆ ಇದೆ
ಆಕ್ಸಿಜನ್ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ನಾಲ್ಕೂ ವರ್ಷಗಳಿಂದಲೂ ಸಂತ್ರಸ್ತರು ಇದಕ್ಕಾಗಿ ಕಾದಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮೇಲೆ ವಿಶ್ವಾಸವಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಮತ್ತು ಅಗತ್ಯ ಪರಿಹಾರ ೋಷಣೆ ಆಗಲೇಬೇಕು. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರು 24 ಎಂದು ಪಟ್ಟಿಯಲ್ಲಿದ್ದು, ದುರಂತದಲ್ಲಿ 36 ಜನರು ಮೃತಪಟ್ಟಿದ್ದಾರೆ. ಆಗಾಗಿ 36 ಕುಟುಂಬಗಳ ಸಂತ್ರಸ್ತರಿಗೂ ಸರ್ಕಾರಿ ಉದ್ಯೋಗವನ್ನು ನೀಡಬೇಕು ಮತ್ತು ಸೂಕ್ತ ಪರಿಹಾರವನ್ನು ೋಷಣೆ ಮಾಡಬೇಕು.
ಸಿ.ಎಂ.ಕೃಷ್ಣಮೂರ್ತಿ, ಸಂಯೋಜಕ, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಚಾಮರಾಜನಗರ
*ಕ್ಯಾಬಿನೆಟ್‌ನಲ್ಲಿ ಪ್ರಸ್ತಾವನೆ ಸಲ್ಲಿಸುವ ಉದ್ದೇಶ
ಇತ್ತೀಚೆಗೆ ಜಿಲ್ಲಾ ಉಸ್ತವಾರಿ ಸಚಿವರ ನೇತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿತ್ತು. ಆದಷ್ಟು ಬೇಗ ಸಂತ್ರಸ್ತರಿಗೆ ಉದ್ಯೋಗ ಮತ್ತು ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಪ್ರಸ್ತಾವನೆ ಸಲ್ಲಿಸುವ ಉದ್ದೇಶದಿಂದ ಮಾಹಿತಿಯನ್ನು ಕೇಳಿದ್ದರು. ನಾವು ಅಗತ್ಯವಾದ ಮಾಹಿತಿಯನ್ನು ನೀಡಿದ್ದೇವೆ.
ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ
*ನಿರೀಕ್ಷೆ ಸುಳ್ಳಾಗದಿರಲಿ
ನಾಲ್ಕೂ ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟದ ಮೇಲೆ ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವು. ಆದರೆ ನಿರೀಕ್ಷೆ ಸುಳ್ಳಾಯಿತು. ಮುಂದಿನ ಕ್ಯಾಬಿನೆಟ್‌ನಲ್ಲಿ ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗವನ್ನು ನೀಡಲೇಬೇಕು. ಸೂಕ್ತ ಪರಿಹಾರವನ್ನು ೋಷಣೆ ಮಾಡಬೇಕು. ಎಸ್‌ಡಿಪಿಐ ಮತ್ತು ಹಲವಾರು ಸಂಘ-ಸಂಸ್ಥೆಗಳು ನಮ್ಮ ಹೋರಾಟಕ್ಕೆ ಬೆನ್ನೆಲುಬಾಗಿದ್ದು, ಈಗಲೂ ನಿರೀಕ್ಷೆ ಸುಳ್ಳಾದರೆ ಜಿಲ್ಲೆಯನ್ನು ಬಂದ್‌ಮಾಡಿ ಹೋರಾಟ ಮಾಡುತ್ತೇವೆ.
ನಾಗರತ್ನ, ಸಂತ್ರಸ್ತೆ, ಚಾಮರಾಜನಗರ
*ನಂಬಿಕೆಯೇ ಹೊರಟು ಹೋಗಿದೆ
ನಾವು ಪರಿಹಾರವನ್ನು ವಾಪಸ್ ಮಾಡುತ್ತೇವೆ ಅಂದಾಗ ಸಂಸದ ಸುನೀಲ್‌ಬೋಸ್ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ಕ್ಯಾಬಿನೆಟ್‌ನಲ್ಲಿ ನಿಮ್ಮ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದ್ದರು. ಆದರೆ ಅದು ಸುಳ್ಳಾಯಿತು. ಇತ್ತೀಚೆಗೆ ಜಿಲ್ಲಾ ಕೇಂದ್ರವನ್ನು ಬಂದ್ ಮಾಡುತ್ತೇವೆ ಎಂದು ಕರೆನೀಡಿದಾಗ ಉಸ್ತವಾರಿ ಸಚಿವರು ಸಭೆ ಕರೆದು ಮುಂದಿನ ಕ್ಯಾಬಿನೆಟ್‌ನಲ್ಲಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ಕೊಟ್ಟರು. 4 ವರ್ಷಗಳಿಂದಲೂ ಇವರು ಭರವಸೆ ನೀಡುವುದೇ ಆಗಿದ್ದು, ನಮಗೆ ಇದರ ಮೇಲೆ ನಂಬಿಕೆಯೇ ಹೊರಟು ಹೋಗಿದೆ.
ಸವಿತಾ, ಸಂತ್ರಸ್ತೆ, ಲಕ್ಕೂರು, ಚಾಮರಾಜನಗರ
*25 ಲಕ್ಷ ರೂ, ಪರಿಹಾರ ೋಷಿಸಿ
ಈ ಬಾರಿ ನಡೆದ ಕ್ಯಾಬಿನೆಟ್‌ನಲ್ಲೇ ಆಕ್ಸಿಜನ್ ಸಂತ್ರಸ್ತರಿಗೆ ಉದ್ಯೋಗ ಮತ್ತು ಪರಿಹಾರ ೋಷಣೆ ಆಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದೇವು. ಪ್ರಸ್ತುತ ಜಿಲ್ಲಾ ಉಸ್ತವಾರಿ ಸಚಿವರು ಮುಂದಿನ ಕ್ಯಾಬಿನೆಟ್‌ಗೆ ಪ್ರಸ್ತಾವನೆ ಸಲ್ಲಿಸಲು ಸಭೆ ಕರೆದಿರುವುದು ಸ್ವಾಗತಾರ್ಹ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗವನ್ನು ೋಷಣೆ ಮಾಡಲೇಬೇಕು. ಆರ್‌ಸಿಬಿ ಕಾಲ್ತುಳಿತದಲ್ಲಿ ಸತ್ತವರಿಗೆ ಯಾವ ರೀತಿಯಲ್ಲಿ ಪರಿಹಾರವನ್ನು ನೀಡಿದರೋ, ಅದರಂತೆ ಸಂತ್ರಸ್ತರಿಗೆ 25 ಲಕ್ಷ ರೂ, ಪರಿಹಾರವನ್ನು ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.
ಡಾ.ಗುರುಪ್ರಸಾದ್, ರೈತ ಮುಖಂಡ, ಚಾಮರಾಜನಗರ