ಜಿಲ್ಲೆ

ಆಕಾಶದಲ್ಲಿ 5ರವರೆಗೂ ಗ್ರಹಗಳ ಪರೇಡ್

ಚಿತ್ರದುರ್ಗ: ಬಾಹ್ಯಾಕಾಶದಲ್ಲಿ ಆಗಿಂದಾಗ್ಗೆ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಈಗ ನಮ್ಮ ಸೌರವ್ಯೆಹದ 3-4 ಗ್ರಹಗಳು ಒಂದೇ ಸಾಲಿನಲ್ಲಿ ಇರುವುದನ್ನು ಬರಿಗಣ್ಣಿನಲ್ಲಿಯೇ ನೋಡಬಹುದಾಗಿದೆ. ಜೂ. 5ರವರೆಗೆ ಗ್ರಹಗಳ ಪರೇಡ್ ಕಣ್ತುಂಬಿಕೊಳ್ಳುವುದು ಮಾತ್ರವಲ್ಲ, ಆನಂದಿಸಬಹುದಾಗಿದೆ.

ಬೆಳಗ್ಗೆ 5ರಿಂದ 5.30ರೊಳಗೆ ದಿಗಂತದಲ್ಲಿ ಬುಧ, ಗುರು, ಮಂಗಳ ಹಾಗೂ ಅದರ ಮೇಲೆ ಶನಿಗ್ರಹಗಳು ಇರುವುದನ್ನು ನೋಡಲು ಇದೊಂದು ಸುವರ್ಣಾವಕಾಶ. ಇದನ್ನು ವೀಕ್ಷಿಸಲು ಯಾವುದೇ ದೂರದರ್ಶಕ, ಬೈನಾಕ್ಯುಲರ್‌ಗಳ ಅಗತ್ಯವಿಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.