ಜಿಲ್ಲೆ

ಆಕಾಂಕ್ಷಿಗಳಲ್ಲಿ ಗರಿಗೆದರಿದ ಅಧಿಕಾರ ಗದ್ದುಗೆ

ಯಾದಗಿರಿ: ತಡವಾದರೂ ಕೊನೆಗೂ ಇಲ್ಲಿನ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅ.೩ರಂದು ಚುನಾವಣೆ ನಿಗದಿಯಾಗಿದೆ.
ಮಿಸಲಾತಿ ಪ್ರಕಟಗೊಂಡು ಎರಡು ತಿಂಗಳು ಸಮೀಪಿಸುತ್ತಿದ್ದರೂ ಚುನಾವಣೆ ದಿನಾಂಕ ನಿಗದಿಯಾಗಿರಲಿಲ್ಲ. ಇದರಿಂದ ಅಧಿಕಾರ ಪಡೆಯಬೇಕೆನ್ನುವ ಆಕಾಂಕ್ಷಿಗಳು ತಳಮಳಗೊಂಡಿದ್ದರು. ಈಗ ದಿನಾಂಕ ನಿಗದಿಯಾಗಿದ್ದರಿಂದ ನಿರಾಳಗೊಂಡ ಅವರೆಲ್ಲರೂ ಈಗ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಹಿರಂಗ, ಅಂತರAಗ ಮತ್ತು ಟೇಬಲ್ ಮಿಟಿಂಗ್ ಜೋರಾಗಿಯೇ ನಡೆದಿವೆ.

ಈ ಸಲ ಎರಡು ಸ್ಥಾನಗಳು ಮಹಿಳೆಯರ ಪಾಲಾಗಿವೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮಿಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ವನಿತೆಯರೇ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೋಮವಾರ ತನ್ನ ೧೩ ನಗರಸಭೆ ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದೆ.

ಇದಕ್ಕಾಗಿ ಎಂಎಲï‌ಸಿ ಜಗದೇವ ಗುತ್ತೇದಾರ, ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ, ಜಿ¯್ಲÁಧ್ಯP್ಷÀ ಬಸರಡ್ಡಿ ಅನಪುರ ಅವರು ಪ್ರತಿಯೊಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ಕರೆದು ಅಭಿಪ್ರಾಯ ಸಂಗ್ರಹಿಸಿ ಪP್ಷÀದ ರಾಜ್ಯ ನಾಯಕರಿಗೆ ತಲುಪಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಿz್ದÁರೆ ಎಂದು ಪP್ಷÀದ ವಕ್ತಾರ ಸ್ಯಾಮಸನ್ ಮಾಳಿಕೇರಿ ಹೇಳಿz್ದÁರೆ. ಆದರೆ ಸಭೆಗೆ ಇಬ್ಬರು ಸದಸ್ಯರು ಗೈರಾಗಿದ್ದರು.


ಇನ್ನೂ ಬಿಜೆಪಿಯು ಸಹ ಸೋಮವಾರ ಸಂಜೆ ಯುವ ನಾಯಕ ಮಹೇಶ ಮುದ್ನಾಳ್ ನೇತೃತ್ವದಲ್ಲಿ ಸಭೆ ನಡೆಸಿ ಚುನಾವಣಾ ಅಖಾಡಕ್ಕೆ ಸಿದ್ದವಾಗುತ್ತಿದೆ ಎಂಬ ಮಾಹಿತಿ ಇದೆ. ನಗರಸಭೆ ಸದಸ್ಯರ ಜತೆ ಮಾತುಕತೆ ನಡೆಸಿ ಪP್ಷÀದ ಮುಖಂಡರಿಗೆ ಮಾಹಿತಿ ರವಾನಿಸಲಿದೆ. ಒಟ್ಟು ೩೧ ಸದಸ್ಯರ ನಗರಸಭೆಯಲ್ಲಿ ೧೬ ಬಿಜೆಪಿ, ೧೩ ಕಾಂಗ್ರೆಸ್, ಇಬ್ಬರು ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಅಧಿಕಾರ ಪಡೆಯಲು ಎರಡು ಪP್ಷÀಗಳಲ್ಲಿನ ಸದಸ್ಯರ ನಡುವೆ ತ್ರೀ ಪೈಪೊಟಿ ಜೋರಾಗಿದೆ. ಬುಧವಾರ ಸಂಜೆ ಸ್ಪಷ್ಟ ಚಿತ್ರಣ ಹೊರಬೀಳಬಹುದು.