ಜಿಲ್ಲೆ

ಆಕಸ್ಮಿಕ ಬೆಂಕಿ ತಗುಲಿ ಕಬ್ಬು ನಾಶ

ಹುಲಸೂರು: ಮುಸ್ತಾಪುರ ಗ್ರಾಮದ ರೈತ ಬಾಲಾಜಿ ಪಾಟೀಲ್ ಅವರು ನಾಲ್ಕು ಎಕರೆಯಲ್ಲಿ ಬೆಳೆದ ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿ ನಾಶವಾದ ಘಟನೆ ಭಾನುವಾರ ನಡೆದಿದೆ. ಭಾನುವಾರ ಮಧ್ಯಾಹ್ನ ಎಲೆಕ್ಟಿçಕ್ ಶಾಕ್‌ನಿಂದ ಬೆಂಕಿ ತಗುಲಿದ್ದು, ಜಮೀನಿನಲ್ಲಿ ನಿಲ್ಲಿಸಿದ್ದ ಎತ್ತಿನ ಗಾಡಿಯೂ ಸುಟ್ಟಿದೆ. ಎತ್ತುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಕಿ ತಗುಲಿದ್ದನ್ನು ಗಮನಿಸಿದ ರೈತ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬಸವಕಲ್ಯಾಣದ ಅಗ್ನಿಶಾಮಕ ದಳದ ತಂಡ ಆಗಮಿಸಿ ಬೆಂಕಿ ನಂದಿಸಿದೆ.