ಜಿಲ್ಲೆ

ಆಕಸ್ಮಿಕ ಬೆಂಕಿ ತಗುಲಿ ಕಬ್ಬು ಹಾನಿ

ಸುಭಾಸ ಹೆಗಡೆ ಧೂಪದಹೊಂಡ

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದ ಕಬ್ಬಿನ ಗದ್ದೆಗೆ ಸೋಮವಾರ ಮೇನ್ ಲೈನ್​ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿದೆ.

ಆನಂದ ಇಂಗೋಲೆ ಎಂಬುವರ ಗದ್ದೆ ಇದಾಗಿದ್ದು, ಮೂರುವರೆ ಎಕರೆ ಕಬ್ಬಿನ ಗದ್ದೆಯಲ್ಲಿ 2 ಎಕರೆ ಕಬ್ಬು ಹಾಗೂ ನೀರುಣಿಸುವ 35 ರಬ್ಬರ್ ಪೈಪ್​ಗಳು ಸುಟ್ಟಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ನಾರಾಯಣ ತಳೇಕರ, ಸ್ವಪ್ನಿಲ್ ಪೆಡ್ನೇಕರ, ಅಭಿ ಕುರುವಿನಕೊಪ್ಪ, ಬಸವರಾಜ ನಾಣಾಪೂರ, ಸಂತೋಷ ಪಾಟೀಲ, ದುರ್ಗಪ್ಪ ಹರಿಜನ, ಮಂಜುನಾಥ ಪಟಗಾರ ಮತ್ತು ಪರಶುರಾಮ ಮಟ್ಟಿಮನಿ ಕಾರ್ಯಾಚರಣೆಯಲ್ಲಿದ್ದರು.</