ಜಿಲ್ಲೆ

ಆಕಸ್ಮಿಕ ಬೆಂಕಿ; ಆಟೋ- ಬೈಕ್ ಭಸ್ಮ

ಬೇಲೂರು: ಮನೆಯ ಪಕ್ಕದ ಶೆಡ್‌ನಲ್ಲಿ ನಿಲ್ಲಿಸಿದ್ದ ಅಟೋ ಹಾಗೂ ಬೈಕ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಬಸ್ಮವಾಗಿರುವ ಘಟನೆ ತಾಲೂಕಿನ ಚಿಕ್ಕಬೇಡಗೆರೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.


ಬೇಲೂರು ಪಟ್ಟಣ ಸಮೀಪ ಇರುವ ಚಿಕ್ಕಬೇಡಗೆರೆ ಗ್ರಾಮದ ಅಟೋ ಚಾಲಕ ಮಹೇಶ, ಎಂಬುವವರಿಗೆ ಸೇರಿದ ಆಟೋ ಹಾಗೂ ಬೈಕನ್ನು ತಮ್ಮ ಮನೆಯ ಪಕ್ಕದಲ್ಲಿದ್ದ ಶೆಡ್‌ನಲ್ಲಿ ನಿಲ್ಲಿಸಿ ಮಲಗಿದ್ದ ಸಂದರ್ಭ ಶನಿವಾರ ಬೆಳಗಿನ ಸಮಯ 2-30 ರಲ್ಲಿ ಏನೋ ಸಿಡಿದ ಶಬ್ದ ಕೇಳಿ ಹೊರ ಬಂದು ನೋಡಿದಾಗ ಆಟೋ, ಬೈಕ್ ಇದ್ದ ಶೆಡ್‌ಗೆ ಸಂಪೂರ್ಣ ಬೆಂಕಿ ಆವರಿಸಿರುವುದನ್ನು ಕಂಡು ಅಕ್ಕಪಕ್ಕದವರ ಹಾಗೂ ಸ್ಥಳೀಯರ ಮತ್ತು ಅಗ್ನಿ ಶಾಮಕ ದಳದವರ ಸಹಕಾರದಿಂದ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಲಾಯಿತು. ಆದರೆ ಜೀವನಕ್ಕೆ ಆಧಾರವಾಗಿದ್ದ ಆಟೋ ಹಾಗೂ ಅವರ ಪುತ್ರನ ಬೈಕ್ ಬೆಂಕಿಗಾಹುತಿಯಾದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತಿದ್ದುದು ಕಾಣಬಹುದಾಗಿತ್ತು.