ಜಿಲ್ಲೆ

ಆಕಸ್ಮಿಕ ಅಗ್ನಿ ಅವಘಡ: ತೋಟಗಾರಿಕಾ ಬೆಳೆಗಳು ಅಪಾರ ನಷ್ಟ

ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿ ಬೋರೆಹಳ್ಳಿ ಗ್ರಾಮದ ಕೃಷಿ ಮಹಿಳೆ ಬಸಮ್ಮ್ಮ ಅವರ ತೋಟದಲ್ಲಿ ಸೋಮವಾರ ಸಂಜೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಹಲವು ತೋಟಗಾರಿಕಾ ಬೆಳೆಗಳು ಸಂಪೂರ್ಣ ಸುಟ್ಟು ಹೋಗಿವೆ. ಕ್ಷಣ ಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ ಬೆಂಕಿ ಶ್ರಿಗಂಧ, ಹೆಬ್ಬೇವು, ಮೆಣಸು,ಸೀಬೆ, ತೆಂಗು ಸೇರಿ ಹಲವಾರು ಬೆಳೆಗಳನ್ನು ಆಪೋಷನ ತೆಗೆದುಕೊಂಡಿದ್ದು ಅಪಾರ ನಷ್ಟ ಸಂಭವಿಸಿದೆ.

ಹನಿ ನಿರಾವರಿಗೆ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಬಳ್ಳಿಗಳು ಬೆಂದು ಹೋಗಿವೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಬೆಳೆ ನಷ್ಟ ಅನುಭಸಿದವರಿಗೆ ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ಬೋರೆಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.