ಬಾಗಲಕೋಟೆ: ಬಾಗಲಕೋಟೆ: ದಸರಾ ಹಬ್ಬ ಅಂಗವಾಗಿ ವಿವಿಧೆಡೆ ವಿಶೇಷ ಕಾರ್ಯಕ್ರಮಗಳು ಜರುಗುತ್ತಿದ್ದು, ಅದರಲ್ಲೂ ನಗರದ ಎಂ.ಜಿ.ರಸ್ತೆಯಲ್ಲಿರುವ ಜಗದಂಭಾ ದೇವಸ್ಥಾನದಲ್ಲಿ ಚಪ್ಪನ್ ಭೋಗ್ ಎನ್ನುವ ವಿಶೇಷ ಪೂಜೆ ಗಮನ ಸೆಳೆಯಿತು.
ಅಂಭಾ ಭವಾನುಗೆ 56 ಬಗೆ ಬಗೆಯ ತಿಂಡಿ ತಿನ್ನಿಸು ಹಾಗೂ ಹಣ್ಣು ಹಂಪಲಗಳನ್ನು ದೇವಿಯ ಮುಂದೆ ಇಟ್ಟು ಪೂಜೆ ಪುನಸ್ಕಾರ ಸಲ್ಲಿಸದ ಬಳಿಕ ಎಲ್ಲಾ ತಿಂಡಿಗಳನ್ನು ಒಂದೆಡೆ ಸೇರಿಸಿದ ಪ್ರಸಾದ ವಿತರಣೆ ಮಾಡಲಾಯಿತು. ಭಕ್ತರೇ ವಿಶೇಷ ಅಡುಗೆ ಸಿದ್ದಪಡಿಸಿ ಜಾತಿ ಮತ,ಪಂಥ ಎನ್ನದೆ ಎಲ್ಲರಿಗೂ ಪ್ರಸಾದ ವಿತರಿಸಿದರು.
ದಸರಾ ಹಬ್ಬ ದಲ್ಲಿ ಜಗದಂಬಾ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ದೇವಿಗೆ ಸಲ್ಲಿಸಲಾಗುತ್ತದೆ.
ಸ್ಥಳೀಯ ಎಸ್ ಎಸ್ ಕೆ ಸಮಾಜದ ಬಾಂಧವರು ಅಷ್ಟಮಿ ದಿನದಂದು ಚಪ್ಪನ್ ಭೋಗ್ ಎಂದು ವಿಶೇಷ ನೇವೈದ್ಯ ಮಾಡಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
ಚಪ್ಪನ್ ಎಂದರೆ 56.ಭೋಗ್ ಅಂದರೆ ಸೇವಿಸುವುದು.56 ವಿವಿಧ ಬಗೆಯ ತಿಂಡಿ ತಿನ್ನಿಸು ಹಾಗೂ ಹಣ್ಣು ಹಂಪಲಗಳನ್ನು ಇಟ್ಟು ಆರತಿ ಮಾಡುವುದು,ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾ ದೇವಿಯನ್ನು ಆರಾಧಿಸುತ್ತಾರೆ. ನಂತರ ಭಕ್ತರಿಂದಲೇ ತಂದಿರುವ ಬಗೆ ಬಗೆಯ ತಿಂಡಿ ತಿನ್ನಿಸುಗಳನ್ನು ಒಂದಡೆ ಸೇರಿಸಿ ಹಂಚುವುದು ಪ್ರತಿ ವರ್ಷದ ವಾಡಿಕೆ. ಸಹಸ್ರಾರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ತನ್ನೂಲಕ ನಾಡಿಗೆ ಉತ್ತಮ ಮಳೆ,ಬೆಳೆ,
ಸುಖ ಶಾಂತಿ ಹಾಗೂ ಸಮೃದ್ದಿ ನೀಡಲಿ ಅಂತ ಪ್ರಾರ್ಥಿಸುತ್ತಾರೆ.
ಒಟ್ಟಿನಲ್ಲಿ ದಸರಾ ಹಿನ್ನಲೆ,ಬಾಗಲಕೋಟೆ ನಗರದ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ಮಾಡುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ.