ಬಾಗಲಕೋಟೆ ನಗರದ ಬಿವಿವಿ ಸಂಘದ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಸಂಸ್ಥಾಪಕ ಪರಮ ಪೂಜ್ಯ ಬೀಳೂರು ಗುರು ಬಸವ ಮಹಾಸ್ವಾಮೀಜಿಯವರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದರ್ಶನ. 
ಜಿಲ್ಲೆ

ಆಕರ್ಷಿಸಿದ ಸಮಗ್ರ ಜೀವನ ಚರಿತ್ರೆಯ ಪ್ರದರ್ಶನ

ಬಾಗಲಕೋಟೆ: ನಗರದ ಬಿವಿವಿ ಸಂಘದ ಸಂಸ್ಥಾಪಕ ಪರಮ ಪೂಜ್ಯ ಬೀಳೂರು ಗುರು ಬಸವ ಮಹಾಸ್ವಾಮೀಜಿಯವರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದರ್ಶನ ಆಕರ್ಷಿಸಿತು.

ಶುಕ್ರವಾರ ನಗರದ ಬಿವಿವಿ ಸಂಘದ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರದರ್ಶನಕ್ಕೆ ಗುಣದಾಳದ ಕಲ್ಯಾಣ ಹಿರೇಮಠದ ಡಾ.ವಿವೇಕಾನಂದ ದೇವರು ಚಾಲನೆ ನೀಡಿದರು. ಶ್ರೀಗಳ ಜನನದಿಂದ ಲಿಂಗೈಕ್ಯ ಆಗುವವರೆಗಿನ ಎಲ್ಲ ಘಟನೆಗಳನ್ನು ಚಿತ್ರಪಟಗಳ ಮೂಲಕ ಪ್ರದರ್ಶನಗೊಳಿಸಿದ್ದು ಗಮನ ಸೆಳೆಯಿತು.

ಬಿವಿವಿ ಸಂಂಘದ ಕಾರ್ಯಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಎಸ್.ಎನ್.ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಸದಸ್ಯರಾದ ಕುಮಾರ ಹಿರೇಮಠ, ರುದ್ರೇಶ ಅಕ್ಕಿಮರಡಿ, ಆರ್.ಎಚ್.ಕಾಯಿ, ಸಂಗಣ್ಣಾ ಕಲಾದಗಿ, ಡಾ.ಅರುಣ ಹೂಲಿ, ಬಸವರಾಜ ಬೊಳಿಶಟ್ಟಿ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಎಸ್. ಪಾವಟೆ ಉಪಸ್ಥಿತರಿದ್ದರು.