ಜಿಲ್ಲೆ

ಆಂಬ್ಯುಲೆನ್ಸ್ ಡಿಕ್ಕಿ ಬೈಕ್ ಸವಾರರಿಬ್ಬರಿಗೆ ಗಭೀರ ಗಾಯ

ಕೊಳ್ಳೇಗಾಲ: ತಾಲೂಕಿನ ಟಗರಪುರ ಬಳಿ ಬೈಕ್ ಹಾಗೂ ಆಂಬ್ಯಲೆನ್ಸ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರಿಬ್ಬರು ಗಭೀರವಾಗಿ ಗಾಯಗೊಂಡಿದ್ದಾರೆ.

ತಾಲೂಕಿನ ಮಲ್ಲಹಳ್ಳಿ ಗ್ರಾಮದ ಕುಮಾರ್ ಮತ್ತು ಮಹೇಶ್ ಗಾಯಗೊಂಡವರು. ಇವರು ಸೋಮವಾರ ದ್ವಿಚಕ್ರ ವಾಹನದಲ್ಲಿ ಮಲ್ಲಹಳ್ಳಿಯಿಂದ ಟಗರಪುರ ಗ್ರಾಮಕ್ಕೆ ಬರುತ್ತಿದ್ದಾಗ ಕೊಳ್ಳೇಗಾಲದ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ 108 ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾರರಾದ ಕುಮಾರ್ ಮತ್ತು‌ ಮಹೇಶ್ ಗಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ತಕ್ಷಣಕ್ಕೆ ಧಾವಿಸಿ ಅಪಘಾತವೆಸಗಿದ ಆಂಬ್ಯುಲೆನ್ಸ್ ನಲ್ಲಿಯೇ ಮೈಸೂರಿನ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿದ್ದಾರೆ. ಅಪಘಾತ ಸ್ಥಳಕ್ಕೆ ಡಿವೈಎಸ್ಪಿ ಎಂ.ಧಮೇಂದ್ರ ಹಾಗೂ ಅಗರ ಮಾಂಬಳ್ಳಿ ಪೊಲೀಸ್ ಠಾಣೆ ಪೊಲೀಸರು‌ ಭೇಟಿ‌ ನೀಡಿ‌ ಪರಿಶೀಲಿಸಿದ್ದಾರೆ.