ಚಂಗಡಿ ಗ್ರಾಮದ ವಿಶಾಲಾಕ್ಷಿ ಎಂಬವರು ತುರ್ತು ವಾಹನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದರು. 
ಜಿಲ್ಲೆ

ಆಂಬುಲೆನ್ಸ್‌ನಲ್ಲೇ ಹೆರಿಗೆ

ಹನೂರು: ಹೆರಿಗೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಗರ್ಭಿಣಿಯೊಬ್ಬರು ಚಂಗಡಿ ಕೌದಳ್ಳಿ ಮಾರ್ಗಮಧ್ಯೆ ಶುಕ್ರವಾರ 108 ತುರ್ತು ವಾಹನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಲೂಕಿನ ಚಂಗಡಿ ಗ್ರಾಮದ ವೆಂಕಟರಾಜು ಎಂಬವರ ಪತ್ನಿ ವಿಶಾಲಾಕ್ಷಿಗೆ ಬೆಳಗ್ಗೆ 9ರ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ತುರ್ತು ವಾಹನದ ಸೇವೆಗೆ ಕರೆ ಮಾಡಿದ್ದರು. ಆಗಮಿಸಿದ ತುರ್ತು ವಾಹನದಲ್ಲಿ ಈಕೆಯನ್ನು ಕರೆದೊಯ್ಯುತ್ತಿದ್ದ ವೇಳೆ ಹೆರಿಗೆಯಾಗಿದೆ. ಈ ವೇಳೆ ವಾಹನದ ವೈದ್ಯಕೀಯ ಸಿಬ್ಬಂದಿ ನಾಗರಾಜು, ಚಾಲಕ ಮಲ್ಲೇಶ್ ಅವರ ಸಹಕಾರ ಪಡೆದು ತಾಯಿ ಹಾಗೂ ಮಗುವನ್ನು ಆರೈಕೆ ಮಾಡಿದ್ದಾರೆ. ಬಳಿಕ ಕೌದಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ.