108 ಆಂಬುಲೆನ್ಸ್‌ನಲ್ಲಿ ಅಸ್ಸಾಂ ಮಹಿಳೆ ಮಗುವಿಗೆ ಜನ್ಮ ನೀಡಿದರು. ಆಂಬುಲೆನ್ಸ್ ಸಿಬ್ಬಂದಿ ಷಣ್ಮುಖ ಇದ್ದರು.  
ಜಿಲ್ಲೆ

ಆಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ

ಕಳಸ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಕಾಫಿ ತೋಟದ ಕಾರ್ಮಿಕ ಮಹಿಳೆ ಶುಕ್ರವಾರ ಆಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡುವಂತಾಯಿತು.

ಮರಸಣಿಗೆ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಬಂದಿರುವ ಅಸ್ಸಾಂ ಮೂಲದ ಮಮ್ತಾಜ್ ಬೇಗಂ ಅವರಿಗೆ ಶುಕ್ರವಾರ ಹೆರಿಗೆ ನೋವುಕಾಣಿಸಿಕೊಂಡಿತು. ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ಮೂಲಕ ಬಂದರು. ಆದರೆ ಅಲ್ಲಿ ಹೆರಿಗೆ ಮಾಡಿಸಲು ವೈದ್ಯರು ಇಲ್ಲದಿದ್ದರಿಂದ ಕಂಗಾಲಾದರು. ಖಾಸಗಿ ಆಸ್ಪತ್ರೆಗೆ ಸೇರಲು ಹಣ ಇಲ್ಲದೆ 70 ಕಿ.ಮೀ ದೂರದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಹೊರಟರು. ದಾರಿಮಧ್ಯೆ ಹೆರಿಗೆ ನೋವು ಹೆಚ್ಚಾದಾಗ ಆಂಬುಲೆನ್ಸ್ ಸಿಬ್ಬಂದಿ ಷಣ್ಮುಖ ಹೆರಿಗೆ ಮಾಡಿಸಿದರು. ಗಂಡು ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಹೆರಿಗೆ ಮಾಡಿಸಲು ಷಣ್ಮುಖ ಅವರಿಗೆ ಆಂಬುಲೆನ್ಸ್ ಚಾಲಕ ಶಿವಕುಮಾರ್ ನೆರವಾದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ತಜ್ಞರ ಹುದ್ದೆ ಖಾಲಿ ಇರುವುದರಿಂದ ಕಾರ್ಮಿಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ.