ಆಂಧ್ರಪ್ರದೇಶದ ವಜ್ರಕರೂರು ಗ್ರಾಮದಲ್ಲಿನ ಜಮೀನಿನಲ್ಲಿ ವಜ್ರಕ್ಕಾಗಿ ಹುಡುಕಾಟ ನಡೆಸಿರುವ ಜನರು.  
ಜಿಲ್ಲೆ

ಆಂಧ್ರದ ಹಳ್ಳಿಗಳಲ್ಲಿ ವಜ್ರದ ಮಳೆ

ರಾಯಚೂರು
ಉತ್ತಮ ಮಳೆಯಾದರೆ ರೈತರು ಉತ್ತಮ ಸಲು ಬರುವ ಸಂತಸದಲ್ಲಿರುತ್ತಾರೆ. ಆದರೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಜ್ರಕರೂರ ಮತ್ತು ಪೆತ್ತಿಕೊಂಡ ಮಂಡಲದ ಹಳ್ಳಿಗಳಲ್ಲಿನ ಮಳೆ ಬಂದರೆ ಹೊಲದಲ್ಲಿ ವಜ್ರದ ಹರಳು ಹುಡುಕಾಟದಲ್ಲಿ ತೊಡಗುತ್ತಾರೆ.
ಹಲವು ವರ್ಷಗಳಿಂದ ಮಳೆಗಾಲದ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಜ್ರದಂತಹ ಹರಳು ಮಳೆ ಬಂದಾಗ ಬೀಳುತ್ತಿದ್ದು, ರೈತರು ಈ ಹರಳುಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಕೆಲವರಿಗೆ ಲಕ್ಷಾಂತರ ರೂ. ಬೆಲೆ ಬಾಳುವ ವಜ್ರಗಳು ದೊರೆತಿವೆ.
ವಜ್ರಕರೂರು ಮಂಡಲದ ವಜ್ರಕರೂರು, ತುಗ್ಗಲಿ, ಜೊನ್ನಾಗಿರಿ, ಮಡ್ಡಿಕೇರಾ, ಬಾಸಿನೇಪಲ್ಲಿ, ಪತ್ತಿಕೊಂಡ ಮಂಡಲದ ಚೆನ್ನಗಿರಿ, ಯಾಪಲಿ, ಮದ್ದಿಕೇರಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆ ಬಂದರೇ ಸಾಕು ಹೊಲದಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು ವಜ್ರಕ್ಕಗಿ ಹುಡುಕಾಟ ನಡೆಸುತ್ತಾರೆ.
ಕೆಲವು ರೈತರಿಗೆ 30 ರಿಂದ 40 ವಜ್ರಗಳು ದೊರೆತಿದ್ದು, ಜೊನ್ನಗಿರಿ ರೈತರೊಬ್ಬರಿಗೆ ದೊರೆತ ವಜ್ರ 10 ಲಕ್ಷ ರೂ.ಗೆ ಮಾರಾಟವಾಗಿದೆ. ಹೀಗಾಗಿ ಈ ಗ್ರಾಮಗಳಲ್ಲಿನ ಜಮೀನುಗಳನ್ನು ಅಕ್ಕಪಕ್ಕದ ಜಿಲ್ಲೆಗಳ ರೈತರು ಲೀಜಿಗೆ ಪಡೆದು ಮಳೆ ಬಂದಾಗ ವಜ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ಜತೆಗೆ ಕೂಲಿ ನೀಡಿ ವಜ್ರ ಹುಡುಕಾಟಕ್ಕೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಾರೆ.

ಜಯನಗರ ಸಾಮ್ರಾಜ್ಯದ ಅವಯಲ್ಲಿ ರಾಯಲಸೀಮಾದಲ್ಲಿ ವಜ್ರಗಳ ಮಾರುಕಟ್ಟೆಯಿತ್ತು. ರಸ್ತೆ ಪಕ್ಕದಲ್ಲಿಟ್ಟು ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆಗಿನ ವಜ್ರಗಳು ಇಂದಿಗೂ ಭೂಮಿಯಲ್ಲಿದ್ದು, ಮಳೆ ಬಂದಾಗ ಮಾತ್ರ ಮನುಷ್ಯನ ಕಣ್ಣಿಗೆ ಗೋಚರವಾಗುತ್ತವೆ ಎನ್ನುವುದು ಅಲ್ಲಿನ ಜನರ ನಂಬಿಕೆಯಾಗಿದೆ. ಅದಕ್ಕೆ ತಕ್ಕಂತೆ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿಯುವ ಮಳೆಯ ಸಂದರ್ಭದಲ್ಲಿ ಮಾತ್ರ ಈ ವಜ್ರಗಳು ಜನರಿಗೆ ದೊರೆಯುತ್ತವೆ. ಪೊಲೀಸ್ ಮತ್ತು ಕಂದಾಯ ಇಲಾಖೆ ಅಕಾರಿಗಳು ದಾಳಿ ನಡೆಸಿ ಕೆಲವರಿಂದ ವಜ್ರಗಳನ್ನು ವಶಪಡಿಸಿಕೊಂಡಿರುವ ಘಟನೆಗಳು ನಡೆದಿದ್ದರೂ ನಿರಂತರವಾಗಿ ವಜ್ರಕ್ಕಾಗಿ ಹುಡುಕಾಟ ನಾಲ್ಕೆದು ದಶಕಗಳಿಂದಲೂ ಮುಂದುವರಿಯುತ್ತಿದೆ.