ಬಾಗಲಕೋಟೆ: ಆರೋಗ್ಯವು ಅಮೂಲ್ಯ ಸಂಪತ್ತಾಗಿದ್ದು, ಪೌಷ್ಠಿಕ ಆಹಾರ, ಮಿತ ವ್ಯಾಯಾಮದ ಮೂಲಕ ಕಾಪಾಡಿಕೊಳ್ಳಬೇಕು. ಹಣದಿಂದ ಅವಶ್ಯಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಆದರೆ ಆರೋಗ್ಯವನ್ನು ಪಡೆದುಕೊಳ್ಳುವುದು ಕಷ್ಟಕರ ಎಂದು ಮನೋವೈದ್ಯ ಡಾ. ಸಿ.ಆರ್ ಚಂದ್ರಶೇಖರ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೇಹ ಮನಸ್ಸು ಮತ್ತು ಆರೋಗ್ಯದರಿವಿನ ಅಭಿಯಾನ ಕಾರ್ಯಕ್ರಮದಲ್ಲಿ ಮನೋವಿಜ್ಞಾನಕ್ಕೆ ಸಂಬಂಽಸಿ ೯ ಕಿರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಆರೋಗ್ಯವಂತ ವ್ಯಕ್ತಿ ಏನನ್ನಾದರೂ ಸಾಽಸಬಲ್ಲ. ಪ್ರತಿಯೊಬ್ಬರಲ್ಲಿಯೂ ಸಾಧರಣ ಬುದ್ಧಿ ಸಾಮರ್ಥ್ಯವಿದ್ದು, ಅದನ್ನು ಉಪಯೋಗಿಸಿಕೊಳ್ಳಬೇಕು. ಆಲೋಚನೆ, ಕಲಿಕೆ, ಸಂವಹಣ, ಸೃಜನಶೀಲತೆ ಮತ್ತು ಕೌಶಲ ಬೆಳವಣಿಗೆಯಿಂದ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ಪ್ರತಿಯೊಬ್ಬರಿಗೂ ಐದು ಭಾಗಗಳನ್ನು ಕಲಿಯುವ ಸಾಮರ್ಥ್ಯವಿದೆ ಒಂದೇ ಭಾಗಗೆ ಸೀಮಿತವಾಗದೆ ಬಹು ಭಾಷೆಗಳನ್ನು ಕಲಿತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ. ದುಡುಕು ನಿರ್ಧಾರಗಳಿಗೆ ಬಲಿಯಾಗದೇ ಭಾವನೆಗಳನ್ನು ನಿಯಂತ್ರಿಕೊಳ್ಳುವ ಸಾಮರ್ಥ್ಯ ಬೆಳಸಿಕೊಳ್ಳಿ. ಕೋಪ, ಭಯ, ಉದ್ವಿಗ್ನತೆಯನ್ನು ಹತೋಟಿಗೆ ತೆಗೆದುಕೊಂಡರೆ ವೈಷಮ್ಯತೆ, ಆತ್ಮಹತ್ಯೆಯಂತಹ ಪ್ರಕರಣಗಳನ್ನು ತಡೆಯಬಹುದು. ಮಾನಸಿಕ ಒತ್ತಡಗಳು ಹೆಚ್ಚುವುದರಿಂದ ಹೃದಯಾಘಾತ, ರಕ್ತದೊತ್ತಡದ, ಸಕ್ಕರೆ ಖಾಯಿಲೆಯಂತಹ ರೋಗಗಳಿಗೆ ಒಳಗಾಗುತ್ತೆವೆ. ಸಮಸ್ಯೆಗಳು ಎದುರಾದರೆ ಚಿಂತೆಗಳಿಗೆ ಬಲಿಯಾಗದೆ ಇತರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗಬೇಡಿ, ದೇಹವನ್ನು ಆರೋಗ್ಯವಾಗಿ, ಮನಸನ್ನು ಪ್ರಶಾಂತವಾಗಿರಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಮಾತನಾಡಿ, ನಮ್ಮ ಆರೋಗ್ಯಕ್ಕೆ ನಾವೇ ಜವಾಬ್ದಾರರು ಅದನ್ನು ಕಾಪಾಡಿಕೊಂಡು ಹೋಗುವ ಹೊಣೆ ನಮ್ಮದಾಗಿದೆ. ದಿನನಿತ್ಯ ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ಆರೋಗ್ಯ ಸಂರಕ್ಷಣೆಯ ಕುರಿತು ಹಲವಾರು ಅಂಕಣಗಳು ಪ್ರಕಟಗೊಳ್ಳುತ್ತಿದ್ದು, ಅವುಗಳನ್ನು ಅದ್ಯಯನಮಾಡಿ ಅರಿವು ಮೂಡಿಸಿಕೊಳ್ಳುವ ಕೆಲಸ ಮಾಡೋನ ಎಂದು ತಿಳಿಸಿದರು.
ಆರ್.ಸಿ ಸ್ನೇಹ ಬಳಗದ ಕಾರ್ಯದರ್ಶಿಗಳಾದ ಎಸ್.ಎಸ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತಮಾಡಿದರು. ಪ್ರಾಧ್ಯಾಪಕ ಡಾ.ಎಸ್.ಡಿ ಕೆಂಗಲಗುತ್ತಿ ಪುಸ್ತಕಗಳ ಪರಿಚಯ ಮಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಎನ್. ಎಸ್. ಎಸ್ ಘಟಕದ ಕಾರ್ಯಕ್ರಮಾಽಕಾರಿ ಎಂ.ಎಚ್ ವಡ್ಡರ, ಡಾ.ವೀರುಪಾಕ್ಷ ಎನ್.ಬಿ, ಉಪನ್ಯಾಸಕÀ ಎ.ಎಸ್ ಕೋಲ್ಹಾರ್ ಸೇರಿದಂತೆ ಸಿ.ಆರ್ ಚಂದ್ರಶೇಖರ ಅಭಿಮಾನಿ ಬಳಗ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.