ಜಿಲ್ಲೆ

ಆಂತರಿಕ ಶಕ್ತಿಯ ಮೌಲ್ಯ ಹೆಚ್ಚಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ವಿಜಯಪುರ

ಮನುಷ್ಯ ಭೌತಿಕ, ಸಾಮಾಜಿಕ ಹಾಗೂ ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಆಂತರಿಕವಾಗಿ ಶಕ್ತಿ ಹಾಗೂ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲಾಗದೆ ಹಿಂದುಳಿದಿದ್ದಾನೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಬ್ರಹ್ಮಕುಮಾರಿ ರೂಪಾ ಹೇಳಿದರು.

ಯಲವಳ್ಳಿ ರಸ್ತೆಯ ಎಂ.ಬೈರೇಗೌಡ ಭವನದಲ್ಲಿ

ಗುರುವಾರ ವಿಜಯಪುರ ಜೆಸಿಐ ಸಂಸ್ಥೆಯ 40ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಟೇಲರಿಂಗ್ ತರಬೇತಿ ಕೇಂದ್ರ ಚಾಲನೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ನಡೆಯುತ್ತಿರುವ ಆಂತರಿಕ ವಿಕೋಪಗಳು, ಯುದ್ಧಗಳು ಮತ್ತಿತರೆ ಅವಘಡಗಳನ್ನು ಮನುಷ್ಯ ತಡೆಗಟ್ಟಲು ಸಾಧ್ಯವಾಗದಿರುವುದು, ಅವರಲ್ಲಿನ ಆಂತರಿಕ ಮೌಲ್ಯಗಳ ಕುಂದುವಿಕೆಗೆ ಕಾರಣವಾಗಿದೆ ಎಂದರು.

ಪ್ರಮಾಣ ವಚನ ಬೋಧನೆ: 2025ನೇ ಸಾಲಿನ ವಿಜಯಪುರ ಜೆಸಿಐ ನ 40ನೇ ವರ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಶೀಲಾಭೈರೇಗೌಡ ಅವರಿಗೆ ವಲಯ 14ರ ಜೆಸಿಐ ಅಧ್ಯಕ್ಷ ವಿಜಯಕುಮಾರ್ ಪ್ರಮಾಣ ವಚನ ಬೋಧಿಸಿದರು.

2025ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ನೂತನ ಅಧ್ಯಕ್ಷೆ ಶೀಲಾ ಬೈರೇಗೌಡ ಪ್ರಮಾಣವಚನ

ಬೋಧಿಸಿದರು. ಪುರಸಭೆ ಮುಖ್ಯಾಧಿಕಾರಿ ಜಿ.ಆರ್. ಸಂತೋಷ್ ಸೇರಿ 12 ಮಂದಿ ನೂತನ ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಂಡರು.

ವಲಯ ಉಪಾಧ್ಯಕ್ಷ ಎಂ.ಕಿರಣ್ ಯಾದವ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆವತಿಯ ವೈಟ್ ಆ್ಯಂಡ್ ವೈಟ್ ಎಂಟರ್‌ಪ್ರೈಸಸ್‌ನ ಎಂ.ಆರ್.ಗಂಗಾಧರ್, ಸೀನಿಯರ್ ಚೇಂಬರ್‌ನ ಅಧ್ಯಕ ಕೆ. ವೆಂಕಟೇಶ್, ಜೆಸಿಐ ವಲಯ ಸಂಯೋಜಕರಾದ

ಮುನಿಕೃಷ್ಣಪ್ಪ, ಎನ್.ಸಿ. ಮುನಿ ವೆಂಕಟರಮಣಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಎಂ.ಶಿವಕುಮಾರ್, ವಕೀಲ ಎನ್.ವಿ. ಜಯರಾಮ್ ಹಾಗೂ ಮಾಜಿ ಅಧ್ಯಕ್ಷರಾದ ಎಸ್.ರಮೇಶ್, ಜನಾರ್ಧನ್, ಅನೀಸ್ ಉರ್ ರಹಮಾನ್, ಕೆ.ವಿ.ಭೈರೇಗೌಡ, ಎಸ್‌ಆರ್‌ಎಸ್ ಬಸವರಾಜು, ಎಂ.ಲೋಕೇಶ್, ದೇವನಹಳ್ಳಿ ಜೆಸಿಐ ಅಧ್ಯಕ್ಷ ಪ್ರಶಾಂತ್ ಚಪ್ಪರಕಲ್ಲು, ಜೆಸಿಐ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ನೂತನ ಕಾರ್ಯಕಾರಿ ಮಂಡಳಿ: ಜೆಸಿಐ ಸಂಸ್ಥೆಗೆ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಶೀಲಾಭೈರೇಗೌಡ, ನಿಕಟ ಪೂರ್ವ ಅಧ್ಯಕ್ಷರಾಗಿ ಎಂ. ಬೈರೇಗೌಡ, ಕಾರ್ಯದರ್ಶಿಯಾಗಿ ಎಂ.ಲೋಕೇಶ್, ಖಜಾಂಚಿಯಾಗಿ ಗಾಯತ್ರಿ ಜನಾರ್ಧನ್, ಉಪಾಧ್ಯಕ್ಷರಾಗಿ ಸರಸ್ವತಿ, ತರಬೇತಿ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ, ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷರಾಗಿ ಮಾಧವಿ ರಮೇಶ್, ಘಟಕ ಅಭಿವೃದ್ಧಿ ಉಪಾಧ್ಯಕ್ಷರಾಗಿ ಶಿಲ್ಪಾ ಬಲಮುರಿ ಶ್ರೀನಿವಾಸ್, ಅಭಿವೃದ್ಧಿ ಮತ್ತು ಬೆಳವಣಿಗೆ ಉಪಾಧ್ಯಕ್ಷರಾಗಿ ಶಶಿಕುಮಾರ್, ಕಾರ್ಯಕ್ರಮ ಉಪಾಧ್ಯಕ್ಷರಾಗಿ ರತ್ನಮ್ಮ, ವ್ಯವಹಾರ ಉಪಾಧ್ಯಕ್ಷರಾಗಿ ಯೇಸು ಮಣಿ, ಟ್ರೈನಿಂಗ್ ಡೆವೆಲಪ್‌ಮೆಂಟ್ ಸದಸ್ಯರಾಗಿ ಪುನೀತ್ ಆರಾಧ್ಯ, ಘಟಕ ಪತ್ರಿಕೆ ಸಂಪಾದಕರಾಗಿ ರಂಜಿತ, ಉಪಸಂಪಾದಕರಾಗಿ ನರಸಿಂಹಮೂರ್ತಿ, ಸಹ ಸಂಪಾದಕರಾಗಿ ಸಂಜಯ್, ಮಹಿಳಾ ಜೆ ಸಿ ಮುಖ್ಯಸ್ಥರಾಗಿ ವನರಾಜಲಕ್ಷ್ಮಿ, ಸಹ ಕಾರ್ಯದರ್ಶಿಯಾಗಿ ವರುಣ್ ವರ್ಮ ಹಾಗೂ ನಿರ್ದೇಶಕ ಮಂಡಳಿ ಸದಸ್ಯರನ್ನು ನೇಮಕ ಮಾಡಲಾಯಿತು.