ಜಿಲ್ಲೆ

ಆಂಜನೇಯ ದೇಗುಲದ ಕಳಸ ಸ್ಥಾಪನೆ 18, 19ಕ್ಕೆ

ಚಿತ್ರದುರ್ಗ:ಕ್ಯಾಸಾಪುರ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಗಂಟೆ ಗೋಪುರ ಕಳಸ ಸ್ಥಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆ.18ರಿಂದ ಎರಡು ದಿನಗಳ ಕಾಲ ನಡೆಯಲಿವೆ.

18ರ ಬೆಳಗ್ಗೆ 8.30 ರಾತ್ರಿ 9ರವರೆಗೆ ನಾನಾ ಧಾರ್ಮಿಕ ವಿಧಿಗಳು ನೆರವೇರಲಿವೆ. 19ರ ಬೆಳಗ್ಗೆ 6ಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಹೋಮ, ಮಹಾ ಪೂರ್ಣಾಹುತಿ, ಬೆಳಗ್ಗೆ 11ಕ್ಕೆ ಗಂಗಾಪೂಜೆಯೊಂದಿಗೆ ಬೆಲಗೂರು ವಿಜಯಮಾರುತಿ ಶರ್ಮ ಅವರಿಂದ ಗಂಟಾಗೋಪುರದ ಕಳಸ ಸ್ಥಾಪನೆ ನೆರವೇರಲಿದೆ. ಕುಂಬಾಭಿಷೇಕ,ಮಹಾಮಂಗಳಾರತಿ, ಆರ್ಶೀವಚನ ನಡೆಯಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಾಲಯ ಸಮಿತಿ ಅಧ್ಯಕ್ಷ ನಾಗಭೂಷಣ ಶಾಸ್ತ್ರಿ ಕೋರಿದ್ದಾರೆ.