ಚಿಕ್ಕಮಗಳೂರು: ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಆಜಾದ್ ಮೈದಾನ ಶ್ರೀ ಗಣಪತಿ ಸೇವಾ ಸಮಿತಿ ಆ. ೨೭ರಿಂದ ಸೆ. ೧೭ರವರೆಗೆ ೮೯ನೇ ವರ್ಷದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಶ್ರೀ ಗಣಪತಿ ಮಹೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಆರ್. ಕೇಶವಮೂರ್ತಿ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. ೨೭ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಬಸವನಹಳ್ಳಿಯಲ್ಲಿರುವ ಕುಂಬಾರ ಬೀದಿಯ ರಂಗನಾಥಸ್ವಾಮಿ ದೇವಸ್ಥಾನದ ಆವರಣದಿಂದ ಶ್ರೀಯವರನ್ನು ವಿವಿಧ ಜಾನಪದ ಕಲಾ ತಂಡಗಳ ಮೂಲಕ ಮೆರವಣಿಗೆಯಲ್ಲಿ ಸಂಜೆ ೫ ಗಂಟೆಗೆ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗಿರುವ ಪೆಂಡಾಲಿನಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದರು.
ಗಣಪತಿ ಉತ್ಸವದ ಅಂಗವಾಗಿ ಪ್ರತಿ ದಿನ ಸಂಜೆ ಹರಿಕಥೆ, ಭಜನೆ, ಶಾಸ್ತಿçÃಯ ಸಂಗೀತ, ಜಾನಪದ ಕಾರ್ಯಕ್ರಮ, ಸುಗಮ ಸಂಗೀತ, ಮಾತೆಯರಿಂದ ಯಕ್ಷಗಾನ, ಡಾನ್ಸ್, ಮ್ಯಾಜಿಕ್ ಮತ್ತು ನಾಲ್ಕು ಆರ್ಕೆಸ್ಟಾçಗಳನ್ನು ಆಯೋಜಿಸಲಾಗಿದೆ ಎಂದರು.
ಸೆ. ೧೦ರಂದು ಬುಧವಾರ ಶ್ರೀ ಸಂಕಷ್ಟ ಹರ ಗಣಪತಿ ವಿಶೇಷ ಪೂಜಾ ಕಾರ್ಯಕ್ರಮ, ಸೆ. ೧೪ರಂದು ಭಾನುವಾರ ಬೆಳಗ್ಗೆ ೧೧ ಗಂಟೆಗೆ ಶ್ರೀಯವರ ಗಣಹೋಮ, ಮಧ್ಯಾಹ್ನ ೧೨ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಸೆ. ೧೭ರಂದು ಮಧ್ಯಾಹ್ನ ೧೨ ಗಂಟೆಗೆ ಶ್ರೀಯವರನ್ನು ಅಲಂಕೃತ ಪ್ರಭಾವಳಿಯಲ್ಲಿ ಕೂರಿಸಿ ಮಂಗಳವಾದ್ಯ, ಕೀಲು ಕುದುರೆ, ಗೊಂಬೆ, ವೀರಗಾಸೆ, ಡೊಳ್ಳುಕುಣಿತ, ಹಳ್ಳಿವಾದ್ಯ, ಡ್ರಮ್ಸ್ ಇನ್ನೂ ಮುಂತಾದ ಜಾನಪದ ಕಲಾ ತಂಡಗಳೊAದಿಗೆ ವಿಜೃಂಭಣೆಯಿAದ ಕೂಡಿದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ ಎಂದು ವಿವಿರಿಸಿದರು.
ನಂತರ ಎಂಜಿ ರಸ್ತೆ ಮೂಲಕ ಸಾಗಿ ಬಸವನಹಳ್ಳಿ ಕೆರೆಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು. ನಗರದ ಎಲ್ಲ ನಾಗರಿಕರು ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವರ್ತಕರು, ಸಾರ್ವಜನಿಕರು, ಸಂಘ-ಸAಸ್ಥೆಗಳ ಮುಖಂಡರು ತನು, ಮನ, ಧನ ಸಹಾಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ಕುಬೇರ, ಖಜಾಂಚಿ ಎಚ್.ಕೆ. ಮಂಜುನಾಥ್, ಕಾರ್ಯಾಧ್ಯಕ್ಷ ಈಶ್ವರಪ್ಪ ಎನ್. ಕೋಟೆ, ಉಪಾಧ್ಯಕ್ಷರಾದ ಎಲ್.ವಿ ಕೃಷ್ಣಮೂರ್ತಿ, ಶ್ರೀನಿವಾಸ್, ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.