ಜಿಲ್ಲೆ

ಆ.5 ರಂದು ಈಚಘಟ್ಟದಲ್ಲಿ ಅನುಭಾವ ಶ್ರಾವಣ ಆರಂಭ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಮುರುಘಾ ಮಠದಿಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ‘ಅನುಭಾವ ಶ್ರಾವಣ’ಎನ್ನುವ ವಿಶೇಷ ಸರಣಿ ಚಿಂತನ ಮಾಲೆ ಕಾರ‌್ಯಕ್ರಮಕ್ಕೆ ಹೊಳಲ್ಕೆರೆ ತಾಲೂಕು ಈಚಘಟ್ಟ ಗ್ರಾಮದಲ್ಲಿ ಆ.5ರಂದು ಚಾಲನೆ ಸಿಗಲಿದೆ.
ಅಂದು ಬೆಳಗ್ಗೆ 10.30ಕ್ಕೆ ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಕಾಲೇಜು,ಆಸ್ಪತ್ರೆ ವೈದ್ಯರಿಂದ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸ ಣಾ ಶಿಬಿರ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ಸಸಿ ನೆಡುವ ಹಾಗೂ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಥಣಿ ಮು ರುಘೇಂದ್ರ ಶಿವಯೋಗಿಗಳವರ ವಿಷಯ ಕುರಿತು ಶಿವಾನುಭವ ಗೋಷ್ಠಿ ನಡೆಯಲಿದೆ.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ,ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾ ಮೀಜಿ, ಶ್ರೀಮೋಕ್ಷಪತಿ ಸ್ವಾಮೀಜಿ,ಶಾಂತವೀರಗುರು ಮುರುಘರಾಜೇಂದ್ರ ಸ್ವಾಮೀಜಿ,ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್,ಮಾ ಜಿ ಶಾಸಕ ಪಿ.ರಮೇಶ್ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ತಿಮ್ಮಪ್ಪಯ್ಯನಹಳ್ಳಿ ಜಿ.ಟಿ.ನಂದೀಶ್ ಉಪನ್ಯಾಸ ನಡೆಸಿಕೊಡಲಿದ್ದಾರೆ.
(ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಗ್ ಶಾಟ್ ಬಳಸಿ)