ಜಿಲ್ಲೆ

ಆ. 1ರಿಂದ 3ರೂ ಹಾಲಿನದ ಹೆಚ್ಚಳ:ಸಹಕಾರ ಸಚಿವ ಕೆ ಎನ್ ರಾಜಣ್ಣ

ಹಾಸನ: ರೈತರ ಹಿತವನ್ನು ಕಾಪಾಡುವ ಉದ್ದೇಶದಿಂದ ಆ.1ರಿಂದ ಹಾಲು ಉತ್ಪಾದಕರಿಗೆ 3ರೂ ಹೆಚ್ಚಿಗೆ ಹಣ ನೀಡಲು ಮಂತ್ರಿಮಂಡಲದಲ್ಲಿ ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದ್ದು, ಇದರಿಂದ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗ್ರಾಹಕರ ಹಾಲಿನ ದರದಲ್ಲಿ ಮೂರು ಹೆಚ್ಚಳ ಮಾಡಿ, ಅದೇ ದರವನ್ನ ಉತ್ಪಾದಕರಿಗೆ ನೀಡುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಇಬ್ಬರನ್ನು ಗಮನದಲ್ಲಿಟ್ಟುಕೊಂಡು ಬೆಲೆ ಹೆಚ್ಚಳ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಡುಪಿ ಶಾಲೆಯ ವಿಡಿಯೋ ರೆಕಾರ್ಡ್ ವಿಚಾರವಾಗಿ ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ.ಅವರಿಗೆ ಮಾಡಲು ಕೆಲಸವಿಲ್ಲ ಆದ್ದರಿಂದ ಇಂತಹದನ್ನ ಹುಡುಕಿಕೊಂಡು ಮಾಡುತ್ತಿದ್ದಾರೆ, ನಾವು ಕೇವಲ ಅಭಿವೃದ್ದಿ ಕಡೆ ಗಮನಹರಿಸುತ್ತೇವೆ ಅವರಿಗೆ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಆ ಘಟನೆ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವುದಾದರೆ ಅದನ್ನು ಬಹಿರಂಗಪಡಿಸಲಿ ಅದನ್ನ ಬಿಟ್ಟು ಎಚ್.ಡಿ. ಕುಮಾರಸ್ವಾಮಿ ಅವರ ತರ ಜೋಬಿನಲ್ಲಿ ಪೆನ್‌ಡ್ರೈವ್ ಇದೆ ಬಿಡುತ್ತೇನೆ ಎನ್ನುವುದು ಸರಿಯಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ ನೂತನವಾಗಿ ಆಯ್ಕೆಯಾಗಿರುವ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳು ಮತ್ತು ಕೆಲಸ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಪತ್ರ ಬರೆದಿದ್ದಾರೆ ಹೊರೆತು ಬೇರೆ ಯಾವುದೇ ಉದ್ದೇಶವಿಲ್ಲ, ನೆನ್ನೆ ನಡೆದ ಸಿ. ಎಲ್.ಪಿ ಸಭೆಯಲ್ಲಿ ಎಲ್ಲಾ ಶಾಸಕರ ಜೊತೆ ಮುಕ್ತವಾಗಿ ಮಾತುಕತೆ ನಡೆಸಲಾಯಿತು ಎಂದು ಹೇಳಿದರು.

ಐದು ವರ್ಷ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುತ್ತದೆ, ಇದನ್ನ ಯಾರಾದರೂ ಕೆಡುವ ಆಸೆ ಇಟ್ಟುಕೊಂಡಿದ್ದರೆ ಅದು ಅವರ ಭ್ರಮೆ, ಬಿ.ಕೆ ಹರಿಪ್ರಸಾದ್ ನಿಷ್ಠಾವಂತ ಕಾರ್ಯಕರ್ತ ಅವರಿಂದ ಪಕ್ಷಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ, ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯದರ್ಶಿಯಾಗಿ ಹಲವು ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನ ಕೆಳಗೆ ಇಳಿಸಿದ್ದಾರೆ ಆದರೆ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು