ಜಿಲ್ಲೆ

ಆ.11ಕ್ಕೆ ಕೊಕಟನೂರಿಗೆ ಮುಖ್ಯಮಂತ್ರಿ ಆಗಮನ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಿರ್ಮಿಸಲಾದ ಪಶು ವೈದ್ಯಕೀಯ ಮಹಾವಿದ್ಯಾಲಯ ಸೇರಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಆ.11 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿ 6 ಸಚಿವರು ಆಗಮಿಸಲಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಬಡಚಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾೀಶ ಜಗದೀಶ ಬಿಸಿರೊಟ್ಟಿ ಮಾತನಾಡಿದರು. ಶ್ರೀಕಾಂತ ಪೂಜಾರಿ, ಬಸವರಾಜ ಹೊಸಕೇರಿ, ಈರಣ್ಣ ವಾಲಿ, ಬೀರಪ್ಪ ಪೂಜಾರಿ ಇತರರಿದ್ದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡವನ್ನು ಶನಿವಾರ ವೀಕ್ಷಿಸಿ ಪ್ರವಾಸಿ ಮಂದಿರದಲ್ಲಿ ತಾಲೂಕಾಕಾರಿಗಳ ಸಭೆ ನಡೆಸಿ ಮಾತನಾಡಿ, ಕೊಕಟನೂರ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಮಹಾವಿದ್ಯಾಲಯ, ಬಸ್ ನಿಲ್ದಾಣ, ಅಥಣಿ ಆರ್‌ಟಿಒ ಕಚೇರಿ, ವಾಲ್ಮೀಕಿ ಭವನ, ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ, ಭೋವಿ ಸಮುದಾಯದ ಶ್ರೀ ಸಿದ್ಧರಾಮೇಶ್ವರ ಏತ ನೀರಾವರಿ ಯೋಜನೆ, ಸತ್ತಿ ಮತ್ತು ಚಿಕ್ಕೂಡ ಬಹುಗ್ರಾಮ ಕುಡಿಯುವ ನೀರಾವರಿ ಯೋಜನೆ ಹಾಗೂ ತೆಲಸಂಗ ಗ್ರಾಮದ ಅಂಬೇಡ್ಕರ್ ವಸತಿ ನಿಲಯ ಸೇರಿ ಹಲವು ಕಾಮಗಾರಿಗಳು ಲೋಕಾರ್ಪಣೆಗೊಳ್ಳಲಿವೆ ಎಂದರು.

ಪಶು ವೈದ್ಯಕೀಯ ಮುಖ್ಯಾಕಾರಿ ಎನ್.ಎ. ಪಾಟೀಲ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಎಇಇ ಜಯಾನಂದ ಹಿರೇಮಠ, ತಾಪಂ ಇಒ ಈರಣ್ಣ ವಾಲಿ, ಅಕಾರಿಗಳಾದ ಎಸ್.ಎಸ್. ಮಾಕಾಣಿ, ಬಸವರಾಜ ಯಾದವಾಡ, ಮಲ್ಲಿಕಾರ್ಜುನ ಹುಂಡೆಕಾರ, ರವೀಂದ್ರ ನಾಯ್ಕೋಡಿ, ವಿಶಾಲ ಜಿ.ಪಿ., ಮುಖಂಡರಾದ ಚಿದಾನಂದ ಸವದಿ, ಶಾಮರಾವ್ ಪೂಜಾರಿ ಇತರರಿದ್ದರು.