ಜಿಲ್ಲೆ

ಆ.10ರಂದು ಡಾ.ಬಿ.ಸಿದ್ದಲಿಂಗಸ್ವಾಮಿಗೆ ಸನ್ಮಾನ

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಆ.10ರಂದು ಬೆಂಗಳೂರಿನಲ್ಲಿ ಉಪನ್ಯಾಸ-ನ್ಮಾನ-ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಆನಂದರಾವ್ ವೃತ್ತದಲ್ಲಿರುವ ಕ.ವಿ.ಪ್ರ.ನಿ.ನಿ ಸಂಘದ ಬೆಳ್ಳಿ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಶುರುವಾಗುವ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಸಹಾಯಕ ಕುಲಪತಿ ಡಾ.ವಿ.ದೀಪಾ ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಬಾಯಿ ವಿಷಯ ಕುರಿತು ಆರೋಗ್ಯ ಸಲಹೆ ನೀಡುವರು.

300ಕ್ಕೂ ಅಧಿಕ ಕೃತಿ ರಚಿಸಿರುವ ಸಾಹಿತಿ ಶಾ.ಮಂ.ಕೃಷ್ಣರಾಯ ಮತ್ತು 400ಕ್ಕೂ ಹೆಚ್ಚು ಕೃತಿ ರಚಿಸಿರುವ ಚಾಮರಾಜನಗರ ಮೂಲದ ಸಾಹಿತಿ, ಆಕಾಶವಾಣಿ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಸಿದ್ದಲಿಂಗಸ್ವಾಮಿ ಅವರನ್ನು ಸನ್ಮಾನಿಸಲಾಗುವುದು. ಕಲಾವಿದರಾದ ನಟರಾಜ ಮತ್ತು ಸನ್ನಿಧಿ ಭಕ್ತಿ ಭಾವ ಸಂಗಿತ ಸಿಂಚನ ಕಾರ್ಯಕ್ರಮ ನಡೆಸಿಕೊಡುವರು. ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಷಿಯೇಷನ್ ಸಂಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅಧ್ಯಕ್ಷತೆವಹಿಸುವರು ಎಂದು ಪ್ರಕಟಣೆ ತಿಳಿಸಿದೆ.