ಜಿಲ್ಲೆ

ಅಹಿಂದ ಜಿಲ್ಲಾ ಸಮಿತಿಯಿಂದ ಸಿಎಂಗೆ ಸನ್ಮಾನ

ಚಾಮರಾಜನಗರ: ಯಳಂದೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹಿಂದ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಹಳೇಪುರ ‌ಮಹೇಶ್ ಅವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡಹೂವಿನ ಹಾರ, ಮೈಸೂರು ಹಾಕಿ, ಶಾಲುಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಾಮರಾಜನಗರ ತಾಲೂಕು ಕುರುಬರ ಸಂಘದ ಅಧ್ಯಕ್ಷ  ಆರ್ ಉಮೇಶ್ ಎಸ್ ಪಿಕೆ,  ರಾಜ್ಯ ಮಹಿಳಾ ಉಪಾಧ್ಯಕ್ಷೆ  ಕಾವೇರಿ ಶಿವಕುಮಾರ್,  ಜಿಲ್ಲಾ ಸಂಚಾಲಕ ಪಿ ಜಗದೀಶ್ ಕೆರೆಹಳ್ಳಿ,  ಕಾರ್ಯಧ್ಯಕ್ಷ ಕೆರೆಹಳ್ಳಿ ರಾಜಕುಮಾರ್ ಜಿಲ್ಲಾ ಖಜಾಂಚಿ ಮದನ್ ಕುಮಾರ್ ಕೆಬ್ಬೆಪುರ,  ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಮಂಜುನಾಥ್ ಮುಳ್ಳೂರು ಯಳಂದೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗಣಗನೂರು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಕೆ ಉಮೇಶ್ ಕೆರೆಹಳ್ಳಿ ಜಿಲ್ಲಾ ಗೌರವಾಧ್ಯ  ಸಯ್ಯಾದ್ ಇಸ್ಮಾಯಿಲ್ , ಪುನೀತ್ ಕುಮಾರ್ ಸಿದ್ದರಾಜು ಕೋಟಂಬಳ್ಳಿ , ಮಧು ರೇಚಂಬಳ್ಳಿ ಇತರರು ಹಾಜರಿದ್ದರು.