ಸಿದ್ದಾಪುರ: ತಾಲೂಕಿನ ಹಸರಗೋಡ ಗ್ರಾಪಂ ವ್ಯಾಪ್ತಿಯ ತಂಗಾರಮನೆ ಅಡಕೆ ತೋಟ ಅರಣ್ಯದ ಸಮೀಪ ನಾಲ್ಕು ದಿನದಿಂದ ಕಾಡುಕೋಣ ಅಸ್ವಸ್ಥಗೊಂಡು ನರಳಾಡುತ್ತಿದೆ. ಅಂದಾಜು ಮೂರು ವರ್ಷದ ಕಾಡುಕೋಣ ಇದಾಗಿದ್ದು, ಮುಂಗಾಲು ಮುರಿದಿದ್ದರಿಂದ ಓಡಾಡಲು ಆಗುತ್ತಿಲ್ಲ. ‘ಈಗಿನ ಪರಿಸ್ಥಿತಿಯಲ್ಲಿ ಅರೆವಳಿಕೆ ಕೊಡುವುದು ಕಷ್ಟವಾಗಿರುವುದರಿಂದ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಅದರ ಚಲನವಲನ ನೋಡಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಎಸಿಎಫ್ ರಘು ತಿಳಿಸಿದ್ದಾರೆ. ಜಾನ್ಮನೆ ಆರ್ಎಫ್ಒ ಪವಿತ್ರಾ, ಉಪವಲಯ ಅರಣ್ಯಾಧಿಕಾರಿ ಮಹ್ಮದ್ ಅಸ್ಪಕ್ ಹಾಗೂ ಸಿಬ್ಬಂದಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾಡುಕೋಣದ ಚಲನವಲನ ಗಮನಿಸುತ್ತಿದ್ದಾರೆ.