ಸರಗೂರುಜ: ಡಾ.ಅಂಬೇಡ್ಕರ್ ಅಸ್ಪೃಶ್ಯರ ಸಾಮಾಜಿಕ, ಅರ್ಥಿಕ ಪ್ರಗತಿಗಾಗಿ ನಿರಂತರ ಹೋರಾಟ ಮಾಡಿದರು ಎಂದು ಸರಗೂರು ಪೋಲಿಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಆರ್.ಕಿರಣ್ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಕೆಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದರು. 1935ರಲ್ಲಿ ಡಾ.ಅಂಬೇಡ್ಕರ್ ಅವರು ನಾನು ಹಿಂದು ಧರ್ಮದಲ್ಲಿ ಇರುವುದಿಲ್ಲ. ನಾನು ಹಿಂದುವಾಗಿ ಹುಟ್ಟಿದ್ದು ಅನಿಶ್ಚಿತ. ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ ಎಂದು ತಿಳಿಸಿದರು.
ಪ್ರಗತಿಪರ ಮುಖಂಡ ಗ್ರಾಮೀಣ ಮಹೇಶ್ ಮಾತನಾಡಿ, 1920ರಲ್ಲಿ ಮೂಕನಾಯಕ ಪತ್ರಿಕೆಯನ್ನು ಆರಂಭಿಸಿದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದವರು ಡಾ.ಅಂಬೇಡ್ಕರ್ ಎಂಬುದನ್ನು ನಾವಿಂದು ನೆನೆಯಬೇಕಿದೆ ಎಂದರು.
ಡಾ.ಅಂಬೇಡ್ಕರ್ ಅವರಿಗೆ 1990ರಲ್ಲಿ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು. ಅವರ ಕೊಡುಗೆಗಳನ್ನು ಒಂದು ಲೇಖನದಲ್ಲಿ, ಒಂದು ದಿನಗಳಲ್ಲಿ ಹೇಳಿ ಮುಗಿಸಲು ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿತ್ವದ ನಾಯಕರು ಭಾರತಕ್ಕೆ ಮತ್ತೊಮ್ಮೆ ಹುಟ್ಟಿ ಬರಬೇಕಿದೆ ಎಂದು ಭಾರತದ ಬಹುಸಂಖ್ಯಾತರು ಬೇಡಿಕೊಳ್ಳುತ್ತಾರೆ ಎಂದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸದಸ್ಯ ಶ್ರೀನಿವಾಸ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು ಮಾತನಾಡಿದರು. ಆಟೋಗಳಿಗೆ ನೀಲಿ ಬಣ್ಣದ ಬಾವುಟ ಕಟ್ಟಿಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾತು.
ಪಪಂ ಉಪಾಧ್ಯಕ್ಷ ಶಿವಕುಮಾರ್, ಸಣ್ಣತಾಯಮ್ಮ, ನೂರಳಾಸ್ವಾಮಿ, ನವೀನ್, ರಮೇಶ್ ಚಂದ್ರಕಲಾ ರಾಜಣ್ಣ, ಹೊರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಲಂಕೆ ಲಕ್ಷ್ಮಣ್, ವೈರಮುಡಿ, ಪುಟ್ಟಯ್ಯ, ಮಹೇಂದ್ರ ಹೂವಿನಕೊಳ, ಸಣ್ಣಸ್ವಾಮಿ, ರಮೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮೂರ್ತಿ, ಭಾನುಪ್ರಕಾಶ್, ಖಂಜಾಚಿ ಪ್ರಸನ್ನ, ಉಪಾಧ್ಯಕ್ಷ ಸತೀಶ್, ಮಧು, ಪ್ರವೀಣ್,ಅವಿನಾಶ್, ಶಿವಣ್ಣ, ಮಹೇಶ್, ಭರತ್, ನಿಗೇಶ್, ನಾಗೇಶ್ ಇತರರಿದ್ದರು.