ಕಲಬುರಗಿ: ದೇಶದಲ್ಲಿ ಅಸ್ಪೃ ಶ್ಯತೆ ಮಾನಸಿಕ ರೋಗವಾಗಿದ್ದು, ಅದನ್ನು ಬೇರು ಸಮೇತ ಕಿತ್ತು ಹಾಕಿ ಸಮ ಸಮಾಜ ನಿರ್ಮಿಸಬೇಕು ಎಂದು ಗ್ರಾಪಂ ಪಿಡಿಒ ರಾಜೇಶ್ವರಿ ಸಾಹು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅಜಾದಪುರದಲ್ಲಿ ಏರ್ಪಡಿಸಿದ್ದ ಅಸ್ಪÈಷ್ಯತಾ ನಿರ್ಮೂಲನಾ ವಿಚಾರಗೋಷ್ಠಿ, ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮಾತನಾಡಿ, ಸರ್ವರೂ ನೆಮ್ಮದಿಯಿಂದ ಜೀವಿಸುವ ಹಕ್ಕು ಹೊಂದಿದ್ದು, ಯಾರೂ ಮೇಲು ಕೀಳು ಅಲ್ಲ. ಆ ಮನಸ್ಥಿತಿಯಿಂದ ಪ್ರತಿಯೊಬ್ಬರೂ ಹೊರ ಬರಬೇಕು ಎಂದರು.
ಗ್ರಾAಪA ಉಪಾಧ್ಯಕ್ಷೆ ಮೀನಾಕ್ಷಿಬಾಯಿ ನಾಕಮನ, ಮುಖ್ಯಗುರು ಜಾಫರ್ ಅಲಿ, ಮುಖಂಡರಾದ ಸೂರ್ಯಕಾಂತ ನಾಕಮನ, ವಿಜಯಕುಮಾರ ಕೋರೆ, ಹುಸನಪ್ಪ ಸಿಂಗೆ, ಲೋಹಿತ ಕೋರೆ, ಕಮಲಾಕರ ಜುಣಗಿ, ಶೈಲಜಾ ಜಾಧವ್, ರುಕ್ಮಿಣಿ ಪೂಜಾರಿ, ವನಿತಾ ಕೋರೆ, ಶಶಿಕುಮಾರ ಶಹಾಬಾದ್ ಇತರರಿದ್ದರು. ಸಂವಿಧಾನ ಸಾಮೂಹಿಕವಾಗಿ ಪಠಿಸಲಾಯಿತು. ಶಿವಲಿಂಗ ನಾಕಮನ್ ನಿರೂಪಣೆ, ವಂದಿಸಿದರು.