ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಯಲು ರಂಗಮAದಿರದಲ್ಲಿ ಲಯನ್ಸ್ ಕ್ಲಬ್, ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ವಿಜಯ ಇಂಟರ್‌ನ್ಯಾಷನಲ್, ಉಡುಪಿಯ ಪ್ರಸಾದ್ ನೇತ್ರಾಲಯನದ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಶಿಬಿರ ನಡೆಸಲಾಯಿತು. ಡಾ. ಸುಂದರಗೌಡ, ಕೆ.ಪುಷ್ಪರಾಜ್, ಗೋಪಿಕೃಷ್ಣ, ಡಾ. ಶೀತಲ್ ಮತ್ತಿತರರಿದ್ದರು. 
ಜಿಲ್ಲೆ

ಅಸಹಾಯಕರಿಗೆ ಆರೋಗ್ಯ ಸೇವೆ

ಚಿಕ್ಕಮಗಳೂರು: ಆರೋಗ್ಯ ಸೇವೆ ವಂಚಿತ ಗ್ರಾಮಾಂತರ ಪ್ರದೇಶದ ಅಸಹಾಯಕರು ಮತ್ತು ವಯೋವೃದ್ಧರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಲಯನ್ಸ್ ಸಂಸ್ಥೆಯ ಮೂಲ ಉz್ದÉÃಶವಾಗಿದೆ ಎಂದು ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ತಿಳಿಸಿದರು.

ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಯಲು ರಂಗಮAದಿರದಲ್ಲಿ ಲಯನ್ಸ್ ಕ್ಲಬ್, ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ವಿಜಯ ಇಂಟರ್‌ನ್ಯಾಷನಲ್, ಉಡುಪಿಯ ಪ್ರಸಾದ್ ನೇತ್ರಾಲಯನದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಶಿಬಿರ ಮತ್ತು ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇವೆಯೇ ಲಯನ್ಸ್ ಸಂಸ್ಥೆಯ ಮುಖ್ಯ ಧ್ಯೇಯವಾಗಿದ್ದು, ಸರ್ಕಾರದ ಆರೋಗ್ಯ ಸೇವೆಯನ್ನು ಗ್ರಾಮೀಣ ಪ್ರದೇಶಗಳ ಕುಗ್ರಾಮಗಳಿಗೆ ತಲುಪಿಸುವುದು ಲಯನ್ಸ್ ಸಂಸ್ಥೆಯ ಉz್ದÉÃಶವಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರಸಕ್ತ ವರ್ಷದಲ್ಲಿ ಲಯನ್ಸ್ ಸಂಸ್ಥೆ ಏರ್ಪಡಿಸಿರುವ ಈ ನೇತ್ರ ತಪಾಸಣೆ ಶಿಬಿರ ೬ನೇ ಶಿಬಿರವಾಗಿದ್ದು, ಸರ್ಕಾರದ ವತಿಯಿಂದ ಹಮ್ಮಿಕೊಳ್ಳುವ ಆರೋಗ್ಯ ಸಂಬAಧಿ ಕಾರ್ಯಕ್ರಮಗಳಿಗೆ ಲಯನ್ಸ್ ಸಂಸ್ಥೆ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ನೇಚರ್ ಕನ್ಸರ್‌ವೇಷನ್ ಟ್ರಸ್ಟ್ನ ಅಧ್ಯಕ್ಷ ಹಾಗೂ ದಂತ ವೈದ್ಯ ಡಾ. ಸುಂದರಗೌಡ ಮಾತನಾಡಿ, ಸರ್ಕಾರದ ಆರೋಗ್ಯ ಸೇವೆ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ಉz್ದÉÃಶದಿಂದ ಮಲ್ಲೇನಹಳ್ಳಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ದೇಶದ ಅಭಿವೃಧ್ಧಿಯಲ್ಲಿ ಯುವಶಕ್ತಿಯ ಪಾತ್ರ ಪ್ರಮುಖವಾಗಿದ್ದು, ಇಂದಿನ ಯುವಜನತೆ ಮದ್ಯಪಾನ, ಧೂಮಪಾನ ಸೇರಿದಂತೆ ಮಾದಕ ವಸ್ತುಗಳ ಚಟದಿಂದ ದೂರ ಇರಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿಕೃಷ್ಣ ಮಾತನಾಡಿ, ಸ್ಥಳೀಯರು ಸಹಕಾರ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ರಕ್ತದಾನದಂತಹ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಇತ್ತೀಚೆಗೆ ತಮ್ಮ ತಾಯಿ ಗೌರಮ್ಮ (೮೨) ಅಸುನೀಗಿದ್ದು, ಅವರ ಎರಡೂ ಕಣ್ಣುಗಳನ್ನು ತಮ್ಮ ಕುಟುಂಬ ದಾನ ಮಾಡಿದ್ದು, ಈ ಕಣ್ಣುಗಳು ಬೇರೆ ಬೇರೆ ದೃಷ್ಠಿದೋಷ ಇರುವ ೪ ಜನರಿಗೆ ನೀಡಲಾಗಿದೆ. ಸಾರ್ವಜನಿಕರು ಕೂಡ ತಮ್ಮ ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೇ ಸುಟ್ಟುಬೂದಿಯಾಗಲು ಅವಕಾಶವಿಲ್ಲದೇ ಬೇರೆಯವರ ದೃಷ್ಠಿಹೀನರಿಗೆ ನೆರವಾಗುವಂತೆ ಮನವಿ ಮಾಡಿದರು.

ಲಯನ್ಸ್ ಕ್ಲಬ್ ಖಜಾಂಚಿ ಎಂ.ಎA. ಗಿರೀಶ್ ಸಮಾರಂಭದಲ್ಲಿ ಉಪಸ್ಥಿರಿದ್ದರು. ಉಡುಪಿ ಪ್ರಸಾದ್ ನೇತ್ರಾಲಯನದ ನೇತ್ರ ತಜ್ಞೆ ಡಾ. ಶೀತಲ್ ಮತ್ತವರ ತಂಡ ನೇತ್ರ ಪರೀಕ್ಷೆ ನಡೆಸಿದರೆ, ನಗರದ ದಂತ ವೈದ್ಯ ಡಾ. ಸುಂದರ್‌ಗೌಡ ದಂತ ತಪಾಸಣೆ ನಡೆಸಿದರು.