ಜಿಲ್ಲೆ

ಅಸಮರ್ಪಕ ಮಾಹಿತಿಗೆ ಸಿಟ್ಟಾದ ಶಿಕ್ಷಣ ಸಚಿವ : ಅಧಿಕಾರಿಗಳ ನಡೆಗೆ ಕೆಂಡಾಮಂಡಲ, ವಿದ್ಯಾರ್ಥಿಗಳ ಗೈರಿಗೆ ಕಾರಣ ಕೇಳಿದ ನಾಗೇಶ್​

ರಾಮನಗರ: ಸೌಮ್ಯ ಸ್ವಭಾವದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಜಿಲ್ಲೆಯಲ್ಲಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಿಂದಾಗಿ ತೀವ್ರ ಕೋಪಗೊಂಡು ಎಲ್ಲರನ್ನೂ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಿಂದ ಸಿಟ್ಟಾದ ಸಚಿವರು ಎಲ್ಲರ ವಿರುದ್ಧ ಹರಿಹಾಯ್ದರು.

ಗೈರೇಕಾದರು?: ಜಿಲ್ಲೆಯಲ್ಲಿ 2021&22ನೇ ಸಾಲಿಗೆ ಎಸ್​ಎಸ್​ಎಲ್​ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೆಕಿ 1558 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀೆಗೆ ನೋಂದಾಯಿಸಿಕೊಂಡಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಗೆರು ಹಾಜರಾಗಲು ಏನು ಕಾರಣ? ಯಾವ ಅಧಿಕಾರಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೀರಿ ತಿಳಿಸಿ. ಯಾವೊಬ್ಬ ಅಧಿ-ಕಾರಿಯಾದರೂ, ಯಾಕೆ ಹೊರಗೆ ಉಳಿದ್ದಾರೆ ಎಂಬುದನ್ನು ಪ್ರಶ್ನಿಸಿದ್ದೀರಾ? ಬಿಇಒ ಆಗಲೀ, ಅಧಿ-ಕಾರಿಗಳಾಗಲಿ ಕಚೇರಿ ಬಿಟ್ಟು ಶಾಲೆಗೆ ತೆರಳಿದ್ದೀರಾ? ತೆರಳಿದ್ದರೇ ಒಂದೇ ಒಂದು ಉದಾಹರಣೆ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ 10ನೇ ತರಗತಿಯೊಂದರಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರೀೆಗೆ ಗೆರು ಹಾಜರಾಗಿದ್ದಾರೆ. ಇದೇ ರೀತಿಯಲ್ಲಿ ಪ್ರತಿ ತರಗತಿಯ ಮಾಹಿತಿಯನ್ನು ಪಡೆದುಕೊಂಡರೆ, ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ ಎಂಬ ಅರ್ಥ ಕೊಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶ ಕಟ್ಟುವ ಇಲಾಖೆ: ಶಿಣ ಇಲಾಖೆ ದೇಶ ಕಟ್ಟುವ ಇಲಾಖೆಯಾಗಿದೆ. ಹುಡುಗಾಟದ ಇಲಾಖೆ ಅಲ್ಲ. ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು ಬಡತನದಿಂದ ಬಂದವರೇ ಆಗಿರುತ್ತಾರೆ. ಇವರ ಬಗ್ಗೆ ನಿಮಗಿರುವ ಉದಾಸೀನತೆ ಇಲ್ಲಿ ಎದ್ದು ಕಾಣುತ್ತಿದೆ. ಮಕ್ಕಳು ಪರೀೆಗೆ ಬರಲಿಲ್ಲ, ಅಧಿಕಾರಿಗಳಿಗೆ ಇದು ಬೇಕಾಗೂ ಇರಲಿಲ್ಲ, ಸಂಬಳ ಬರದಿದ್ದರೆ ಕರೆ ಮಾಡುತ್ತೀರಿ, ವಿದ್ಯಾರ್ಥಿಗಳು ಪರೀೆಗೆ ಬರದಿದ್ದರೆ ಏನು ಮಾಡುತ್ತೀರಿ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಜಿಲ್ಲಾಧಿ-ಕಾರಿ ಡಾ.ಅವಿನಾಶ್​ ಮೆನನ್​ ರಾಜೇಂದ್ರನ್​, ಜಿಪಂ ಸಿಇಒ ಇಕ್ರಂ ಸೇರಿದಂತೆ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ಶಿಣ ಇಲಾಖೆ ಅ-ಕಾರಿಗಳು ಈ ವೇಳೆ ಹಾಜರಿದ್ದರು.

ಉಲ್ಟಾ ಆದ ಲೆಕ್ಕ: ಪ್ರತಿ ಸಭೆಗೂ ಅಧಿಕಾರಿಗಳು ಅಂಕಿ&ಅಂಶಗಳ ಬುಕ್​ಲೆಟ್​ ಕೊಡುತ್ತಾರೆ. ಇದೇ ಅಂಕಿ ಅಂಶಗಳನ್ನು ಇಟ್ಟು ಕೊಂಡು ಸಚಿವರು ಅಧಿಕಾರಿಗಳ ಲೆಕ್ಕವನ್ನು ಉಲ್ಟಾ ಮಾಡಿದರು. ಕನಕಪುರದ ಬಿಇಒ, ಒಬ್ಬ ವಿದ್ಯಾರ್ಥಿ ಹದಯ ಸಂಬಂ-ಧಿ ಕಾಯಿಲೆಯಿಂದ ಮತಪಟ್ಟಿರುವುದಾಗಿ ತಿಳಿಸಿದರು. ಶಾಲೆಗಳಲ್ಲಿ ವೆದ್ಯಕಿಯ ತಪಾಸಣೆ ವೇಳೆ ಈ ಸಂಗತಿ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದಾಗ ಸದರಿ ಅಧಿ-ಕಾರಿ ಮೌನ ಸಚಿವರನ್ನು ಕೆರಳಿಸಿತು. ಇನ್ನು ರಾಮನಗರ ಬಿಇಒ ಸಮವಸ್ತ್ರದ ಬೇಡಿಕೆ, ಪೂರೆಕೆ ಹಾಗೂ ಬಾಕಿಗೆ ಸಂಬಂಧಿಸಿದಂತೆ ನೀಡಿದ ಅಂಕಿ&ಅಂಶಗಳು ಸಮವಸ್ತ್ರಕ್ಕೆ ಸಂಬಂ-ಧಿಸಿದ ನೋಡಲ್​ ಅ-ಧಿಕಾರಿ ನೀಡಿದ ಅಂಕಿ&ಅಂಶಗಳಿಗೂ ತಾಳೆಯಾಗಲಿಲ್ಲ. ಹೀಗಾಗಿ ನಾಗೇಶ್​ ಮತ್ತೆ ಸಿಟ್ಟಾದರು. ಸಚಿವರ ಆಪ್ತ ಸಹಾಯಕ ರವಿ, ರಾಜ್ಯಮಟ್ಟದಲ್ಲಿ ಶೇ.100 ಸಮವಸ್ತ್ರ ಪೂರೆಕೆಯಾಗಿದೆ, ರಾಮನಗರಕ್ಕೆ ಆಗಲಿಲ್ಲವೇ ಎಂದು ಪ್ರಶ್ನಿಸಿದಾಗ ಅಧಿ-ಕಾರಿಗಳಿಂದ ಉತ್ತರ ಬರಲೇ ಇಲ್ಲ.

ಬಿಸಿಯೂಟದ ಸಮಸ್ಯೆ: ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ಅಂಕಿ ಅಂಶಗಳಿಗೂ, ಬಿಸಿಯೂಟದ ಅಧಿ-ಕಾರಿಗಳು ನೀಡಿದ ಅಂಕಿ & ಅಂಶಗಳಿಗೂ ತಾಳೆಯಾಗಲಿಲ್ಲ. ವಿದ್ಯಾರ್ಥಿಗಳ ಗೆರು ಹಾಜರಿ, ದಾಖಲಾತಿ, ಹಾಜರಾತಿ ತಾಳೆಯಾಗಲಿಲ್ಲ. ಡಿಡಿಪಿಐ ಮತ್ತು ಬಿಸಿಯೂಟದ ಅ-ಧಿಕಾರಿಗಳು ನೀಡಿದ ಅಂಕಿ&ಅಂಶಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಬಂಧ ಅ-ಧಿಕಾರಿಗಳು ಮಾಹಿತಿ ಕೊಡಲು ವಿಲರಾದರು. ಕಳೆದ ಸಾಲಿನಲ್ಲಿ ಊಟ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ, ಶಾಲೆಗೆ ಹಾಜರಾತಿ ಅವಧಿ, ವಿದ್ಯಾರ್ಥಿಗಳ ಸಂಖ್ಯೆಯನ್ನು ತರಗತಿವಾರು ಮಾಹಿತಿ ಕೊಡಿ ಎಂದು ಡಿಡಿಪಿಐಗೆ ಸಚಿವರು ಸೂಚಿಸಿದರು.