ಚಿತ್ರದುರ್ಗ: ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ಬದ್ಧವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ಹೇಳಿದರು. ಜಿಪಂದಲ್ಲಿ ಕಾರ್ಮಿಕ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯಮದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಿಂದ 43 ಹಾಗೂ ಕೇಂದ್ರದಿಂದ 397 ಕ್ಷೇತ್ರಗಳನ್ನು ಅ ಸಂಘ ಟಿತ ಕಾರ್ಮಿಕ ವಲಯಗಳೆಂದು ಪರಿಗಣಿಸಲಾಗಿದೆ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕ ವಲಯ ವ್ಯಾಪ್ತಿಯಲ್ಲಿರುವ 50 ಲಕ್ಷ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸೂಕ್ತ ಕಾನೂನು ರೂಪಿಸಲಾಗುವುದೆಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಅಂದಾಜು 6500 ಕೋಟಿ ರೂ.ಅನುದಾನ ಸದ್ಬಳಕೆ ಆಗಬೇಕು. ಕಟ್ಟಡ ಕಾರ್ಮಿಕರಲ್ಲದವರೂ ಮಾಡಿಸಿರುವ ಬೋಗಸ್ ನೋಂದಣಿ ಕಾರ್ಡ್‌ಗಳನ್ನು ರದ್ದುಪಡಿಸ ಬೇಕೆಂಬುದು ಸಂಘಟನೆಗಳು ಮನವಿ ಮಾಡಿವೆ. ಬೋಗಸ್ ನೋಂದಣಿ ತಡೆಯುವ ಉದ್ದೇಶದಿಂದ ಜಿಯೋ ಮ್ಯಾಪಿಂಗ್ ತಂತ್ರಾಂಶವನ್ನು ರೂಪಿಸಲಾಗುತ್ತಿದೆ. ಸೌಲಭ್ಯ ದುರು ಪಯೋಗದ ಅನೇಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕಾರ್ಮಿಕರ ಕನಿಷ್ಟ ವೇತನ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಆಸ್ತಿ ತೆರಿಗೆಯಲ್ಲಿ ಶೇ.6 ಸೆಸ್ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕಾರ್ಮಿಕ ಮುಖಂಡ ಜಿ.ಟಿ.ಸುರೇಶ್‌ಬಾಬು ಮಾತನಾಡಿ, ಸಿನಿಮಾ ಮಂದಿರ, ಎಪಿಎಂಸಿ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಲು ಕಾನೂನಿಗೆ ತಿದ್ದುಪಡಿ ತರಬೇಕು. ವಿದ್ಯಾರ್ಥಿವೇತನ ಬಿಡುಗಡೆ ಮಾಡ ಬೇಕೆಂದರು. ಶಫಿಉಲ್ಲಾ ಮಾತನಾಡಿ,ಬೋಗಸ್‌ಕಾರ್ಡ್ ನೋಂ ದಣಿ ನಿಯಂತ್ರಿಸದಿದ್ದರೆ ನಿಜವಾದ ಕಾರ್ಮಿಕರಿಗೆ ಅನ್ಯಾಯವಾದಂತಾಗುತ್ತದೆ. ಅಸಂಘಟಿತ ಕಾರ್ಮಿಕರಿಗೆ ಗುರುತಿನ ಕಾರ್ಡ್ ನೀಡಬೇಕು ಎಂದರು.
ಗೌಸ್‌ಪೀರ್ ಮಾತನಾಡಿ,ವಿವಾಹ ಧನ ಸಹಾಯ ಸಮರ್ಪಕವಾಗಿ ಬಿಡುಗಡೆ ಆಗುತ್ತಿಲ್ಲ,150 ಜನರಿಗೆ ಮಾತ್ರ ಲ್ಯಾಪ್‌ಟಾಪ್ ನೀಡ ಲಾಗಿದೆ, ಕಾರ್ಮಿಕರ ಆರೋಗ್ಯಕ್ಕೆಂದೇ ಪ್ರತ್ಯೇಕ ವೈದ್ಯರನ್ನು ನೇಮಿಸ ಬೇಕೆಂದರು. ಇನ್ನೂ ಕೆಲವು ಮುಖಂಡರು ಮಾತನಾಡಿ, ಬೋ ಗಸ್ ಕಾರ್ಡ್‌ದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದಕ್ಕೆ ಸಹಕರಿಸುವ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಹಮಾಲರಿಗೆ ಕನಿಷ್ಠ ವೇತನ,ವಸತಿ ರಹಿತರಿಗೆ ಮನೆ ನೀಡ ಬೇಕು. ಕೆಎಸ್‌ಆರ್‌ಟಿಸಿ ಬಸ್ ಪಾಸ್ ಸೌಲಭ್ಯವನ್ನು ಮರು ಆರಂಭಿಸುವುದು ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು,ಉದ್ಯಮಿಗಳು ಇದ್ದರು.