ಜಿಲ್ಲೆ

ಅಷ್ಟಲಕ್ಷ್ಮೀ ಅನಾವರಣ

Chitradurga - Desk - Pranav Kumar

ಚಿತ್ರದುರ್ಗ: ವರಮಹಾಲಕ್ಷ್ಮೀ ದೇವಿ ಹಬ್ಬದ ಅಂಗವಾಗಿ ಜೆಸಿಆರ್ ಬಡಾವಣೆಯ ನೇತ್ರಾ ಲೋಕೇಶ್ ಅವರ ಮನೆಯಲ್ಲಿ ಅಷ್ಟಲಕ್ಷ್ಮೀ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು.

ಸಂಪತ್ತಿನ ಮಾದರಿಯಲ್ಲಿ ಬಂಗಾರ ವರ್ಣದ ಆಭರಣಗಳನ್ನು ದೇವಿಯರ ಮುಂದಿಟ್ಟು ಸಿಂಗರಿಸಿ, ನೂರಾರು ದೀಪಗಳೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಕೆಲವರ ಮನೆಗಳಲ್ಲಿನ ವಿಶಿಷ್ಟ ಅಲಂಕಾರ ಅತಿಥಿಗಳ ಗಮನ ಸೆಳೆದವು.