ಜಿಲ್ಲೆ

ಅಶ್ವತ್ಥನಾರಾಯಣ ಹೇಳಿಕೆ ಸರಿಯೋ-ತಪ್ಪೋ ಮೋದಿ, ಷಾ ಸ್ಪಷ್ಟಪಡಿಸಲಿ

ಎಚ್16-ಸಂತೋಷ1

ಹುಬ್ಬಳ್ಳಿ: ಟಿಪ್ಪು ರೀತಿಯಲ್ಲಿ ನನ್ನನ್ನು ಮುಗಿಸಬೇಕು ಎಂದು ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ ಷಾ, ಇದು ಸರಿಯೋ- ತಪ್ಪೋ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ನಾನು ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿರುದ್ಧ ದೂರು ಕೊಡಲು ಹೋಗುವುದಿಲ್ಲ. ಪೊಲೀಸ್​ರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಿ. ಸಚಿರನ್ನು ರಾಜ್ಯಪಾಲರು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಹೊಡಿ-ಬಡಿ ಎಂಬುದು ಬಿಜೆಪಿಯ ಸಂಸ್ಕೃತಿ. ಆರ್​ಎಸ್​ಎಸ್​ನವರು ಇಂಥವರ ಬಾಯಿಯಿಂದ ಈ ಹೇಳಿಕೆ ಕೊಡಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದವರು ಇವರು. ಮುಂಬರುವ ಚುನಾವಣೆಯು ಟಿಪ್ಪು ವರ್ಸಸ್ ಸಾವರ್ಕರ್ ಎಂದು ಬಿಜೆಪಿಯವರು ತಮ್ಮ ಪ್ರಾಣಾಳಿಕೆಯಲ್ಲಿ ಬರೆದುಕೊಳ್ಳಲಿ. ಜನ ತೀರ್ಮಾನ ಮಾಡಲಿ. ಸಿದ್ದರಾಮಯ್ಯನನ್ನು ಮುಗಿಸಿರಿ ಅಂದ್ರೆ ಎನ್ ಅರ್ಥ? ಇದನ್ನು ಎಲ್ಲರೂ ಖಂಡಿಸಬೇಕು ಎಂದರು.