ಜಿಲ್ಲೆ

ಅವ್ವಣ್ಣ ಮ್ಯಾಕೇರಿ ಸೇರಿ ಇತರರ ಬಂಧನ

ರಮೇಶ ಮೇಳಕುಂದಾ

ಕಲಬುರಗಿ: ಚಿತ್ತಾಪುರ ತಾಲೂಕಿನ ಕಾಗಿಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯಬೇಕು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ತೊಗರಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ನೀಡಲು ಮುಂದಾದ ಎಪಿಎಂಸಿ ಮಾಜಿ ಅಧ್ಯ ಅವ್ವಣ್ಣ ಮ್ಯಾಕೇರಿ ಅವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಮನವಿ ಸಲ್ಲಿಸಲು ಪೊಲೀಸ್​ ಇಲಾಖೆಯೂ ಅನುಮತಿ ನೀಡಿತ್ತು. ಅದರಂತೆ ಐವಾನ್​ ಇ ಶಾಹಿ ಅತಿಥಿ ಗೃಹದಲ್ಲಿ ಮನವಿ ಕೊಡಲು ಹೊರಟಾಗ ಅವ್ವಣ್ಣ ಮ್ಯಾಕೇರಿ ಮತ್ತು ಇತರರನ್ನು ತಡೆದ ಪೊಲೀಸರು ಒಳಗೆ ಬಿಡಲಿಲ್ಲ. ಈ ವೇಳೆ ಗೇಟ್​ ಎದುರು ರಸ್ತೆ ಮೇಲೆ ಕುಳಿತ ಅವ್ವಣ್ಣ ಮ್ಯಾಕೇರಿ ರ‍್ಕಾರದ ವಿರುದ್ಧ, ಗುಂಡಾ ಪೊಲೀಸ್​ ಎಂದು ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅವ್ವಣ್ಣ ಮ್ಯಾಕೇರಿ, ಭೀಮಶೆಟ್ಟಿ ಮುಕ್ಕಾ, ಶಿವಕುಮಾರ ಪಾಟೀಲ್​, ಚಂದ್ರಕಾಂತ ಕಿರಸಾವಳಗಿ ಸೇರಿ ಸಹಪಾಠಿಗಳನ್ನು ಬಂಧಿಸಿದ ಪೊಲೀಸರು ನಗರದ ಹೊರವಲಯದ ರಹತಾಬಾದ್​ ಪೊಲೀಸ್​ ಠಾಣೆಗೆ ಕರೆದೊಯ್ದು, ನಂತರ ಬಿಡುಗಡೆ ಮಾಡಿದರು.

ಪ್ರಿಯಾಂಕ್​ ಬಣ್ಣ ಬಯಲಾಗುವ ಭಯ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ಅವರ ೇತ್ರ ಚಿತ್ತಾಪುರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಆ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೆ ತಮ್ಮ ಬಣ್ಣ ಬಯಲು ಆಗುತ್ತದೆ ಎಂದು ಪೊಲೀಸರನ್ನು ಛೂ ಬಿಟ್ಟು ಬಂಧಿಸಿದ್ದಾರೆ ಎಂದು ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಅವ್ವಣ್ಣ ಮ್ಯಾಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನವಿ ನೀಡಲು ಪೊಲೀಸ್​ ಇಲಾಖೆ ಅನುಮತಿ ನೀಡಿತ್ತು. ಆದರೆ ಸಿಎಂ ಎದುರು ಬಣ್ಣ ಬಯಲಾಗುವ ಭಯದಿಂದ ಬಂಧಿಸಿ, ರಹತಾಬಾದ್​ ಪೊಲೀಸ್​ ಸ್ಟೇಷನ್​ನಲ್ಲಿ ಇರಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಮನವಿ ಸಲ್ಲಿಸುವುದು ಎಲ್ಲರ ಹಕ್ಕು. ಅದನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ನೀಡಲಾಗುವುದು. ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.