ನಾಗನೂರ: ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ (ಕೆಎಚ್ಡಿಸಿ) ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆೆ ಕೈಗೊಂಡು ತಪ್ಪಿತಸ್ಥರಿಗೆ ಶಿೆ ವಿಧಿಸಬೇಕು ಎಂದು ರಾಜ್ಯ ನೇಕಾರ ಸೇವಾ ಸಂದ ಅಧ್ಯಕ್ಷ ಶಿವಲಿಂಗ ಟರ್ಕಿ ಆಗ್ರಹಿಸಿದರು.
ರಾಜ್ಯದ ವತ್ತಿಪರ ನೇಕಾರರ ಹಕ್ಕೊತ್ತಾಯಗಳ ಈಡೇರಿಕೆ ಹಾಗೂ ಕೆಎಚ್ಡಿಸಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿ ಹಗರಣ ಮರು ತನಿಖೆಗೆ ಒತ್ತಾಯಿಸಿ ಬನಹಟ್ಟಿಯಿಂದ ಹುಬ್ಬಳ್ಳಿವರೆಗೆ ಹಮ್ಮಿಕೊಂಡಿರುವ ಸ್ವಾಭಿಮಾನಿ ನೇಕಾರ ಪಾದಯಾತ್ರೆ ಸೋಮವಾರ ನಾಗನೂರ ಪಟ್ಟಣಕ್ಕೆ ಆಗಮಿಸಿತು. ಪಾದಯಾತ್ರೆ ಅ.13ರಂದು ಬನಹಟ್ಟಿಯಿಂದ ಆರಂಭವಾಗಿದೆ. ಮೂಡಲಗಿ, ಗೋಕಾಕ, ಯಮಕನಮರಡಿ, ಬೆಳಗಾವಿ, ಚನ್ನಮ್ಮನ ಕಿತ್ತೂರು, ಧಾರವಾಡ ಮಾರ್ಗವಾಗಿ 19ರಂದು ಹುಬ್ಬಳ್ಳಿ ಕೆಎಚ್ಡಿಸಿ ಪ್ರಧಾನ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.
ಪಾದಯಾತ್ರಿಕರಿಗೆ ಸ್ವಾಗತ: ನಾಗನೂರು ಪಟ್ಟಣಕ್ಕೆ ಪಾದಯಾತ್ರೆ ಆಗಮಿಸಿದಾಗ ನೇಕಾರರು ಹಾಗೂ ಕುರುಹಿನಶೆಟ್ಟಿ ಸಮುದಾಯದವರು ಸ್ವಾಗತ ಕೋರಿದರು. ಮುಖಂಡರಾದ ಶ್ರೀಶೆಲ್ ಬಿಸನಕೊಪ್ಪ, ಮಲ್ಲಿಕಾರ್ಜುನ ಗುಣದಾಳ, ಈರಣ್ಣ ಮರಿಜಾಡರ, ಸೋಮಲಿಂಗ ಬಾಗೇವಾಡಿ, ಕಲ್ಲಪ್ಪ ಬಾಗೇವಾಡಿ, ರಮೇಶ ಮರಿಜಾಡರ, ರವಿ ಮರಿಜಾಡರ, ಶಿವಕುಮಾರ ಗುದಗಪ್ಪನವರ ಇತರರಿದ್ದರು.