ಜಿಲ್ಲೆ

ಅವ್ಯವಹಾರ ಆರೋಪದ ತನಿಖೆ ಎದುರಿಸಲು ಸಿದ್ಧ:ಸೋಮನಹಳ್ಳಿ ನಾಗರಾಜು

ಹಾಸನ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷನಾಗಿ ಪಾರದರ್ಶಕವಾಗಿ ಆಡಳಿತ ನಡೆಸಿಕೊಂಡು ಬಂದಿದ್ದು, ಅವ್ಯವಹಾರ, ಹಣ ದುರ್ಬಳಕೆ ಆರೋಪದ ಸತ್ಯಕ್ಕೆ ದೂರವಾದುದು ಎಂದು ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ತಿಳಿಸಿದರು.

ಕೆಲವರು ಮಾಡುತ್ತಿರು ಆರೋಪವನ್ನು ಸಾಬೀತು ಪಡಿಸಿದರೆ ಯಾವುದೇ ತನಿಖೆಗೆಗೂ ಸಿದ್ದವಾಗಿರುವುದ್ದಾಗಿ ತಿಳಿಸಿದ ಅವರು ಸಾಲ ಮನ್ನಾ ವಿಚಾರದಲ್ಲಿ ಸಂಪೂರ್ಣ ದಾಖಲಾತಿ ನೀಡಿರುವುದಲ್ಲಿ ರಾಜ್ಯದಲ್ಲೇ ನಮ್ಮ ಬ್ಯಾಂಕ್ ಮೊದಲಿದೆ. ಪ್ರತಿ ವಾರವೂ ಸಭೆ ನಡೆಸಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ ಸಾಲಗಾರರ ಪಟ್ಟಿಯನ್ನು ಕೂಡ ಪ್ರಕಟಿಸಿದ್ದೇವೆ ಎಂದು ಗುರುವಾರ ಬ್ಯಾಂಕಿನಲ್ಲಿ ಸುದ್ದಿಗೋಷಿಯಲ್ಲಿ ಹೇಳಿದರು.

ಈ ಹಿಂದೆ ನಮ್ಮ ಬ್ಯಾಂಕ್ ಮೇಲೆ ಐ.ಟಿ ದಾಳಿ ಮಾಡಿದಾಗಲೂ ಯಾವ ಲೋಪವೂ ಕಂಡು ಬರಲಿಲ್ಲ. ಎಲ್ಲಾ ದಾಖಲಾತಿ ನೋಡಿ ಅವರೇ ಅಭಿನಂಧಿಸಿ ಹೋಗಿದ್ದಾರೆ. ಈಗಿನ ಆರೋಪದ ಬಗ್ಗೆ ಈಗಾಗಲೇ ಕಾನೂನು ತಜ್ಞರ ಸಲಹೆ ಕೇಳಲಾಗಿದೆ. ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

13.48 ಕೋಟಿರೂ. ಲಾಭ :

1953ರಲ್ಲಿ ಹೆಚ್‌ಡಿಸಿಸಿ ಬ್ಯಾಂಕ್ 8.53 ಲಕ್ಷರೂ. ಬಂಡವಾಳದೊಂದಿಗೆ ಪ್ರಾರಂಭವಾಗಿದ್ದು, 2023 ಮಾರ್ಚ್ ಅಂತ್ಯಕ್ಕೆ 1638.98 ಕೋಟಿ ಠೇವಣಿ, 83.69 ಕೋಟಿ ಶೇರು ಬಂಡವಾಳ ಹಾಗು 2207.67 ಕೋಟಿರೂ. ಬಂಡವಾಳ ಹೊಂದಿದೆ. ಒಟ್ಟು 1836.14 ಕೋಟಿರೂ. ಸಾಲ ವಿತರಿಸಲಾಗಿದೆ. ಬ್ಯಾಂಕ್ ಸತತವಾಗಿ 20 ವರ್ಷಗಳಿಂದ ಲಾಭ ಗಳಸುತ್ತಿದ್ದು, 2022-2023ನೇ ಸಾಲಿನಲ್ಲಿ 13.48 ಕೋಟಿರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದು, ಜಿಲ್ಲೆಯಲ್ಲಿರುವ 211 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 1,97,043 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲವಾಗಿ 1089.09 ಕೋಟಿ ಮತ್ತು 1414 ರೈತರಿಗೆ ಮಧ್ಯಮಾವಧಿ ಸಾಲವಾಗಿ 103.16 ಕೋಟಿರೂ., ಕೃಷಿ ವಲಯಕ್ಕೆ ಒಟ್ಟು 1192.25 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ಅಂಕೇಜ್ ಯೋಜನೆಯಡಿ 118.01 ಕೋಟಿರೂ. ಸಾಲ ಸೌಲಭ್ಯವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕಿರು ಸಾಲ ನೀಡುವ ಪಿ.ಎಂ ಸ್ವನಿಧಿ ಯೋಜನೆಯಡಿ 43 ಜನರಿಗೆ 6.19 ಲಕ್ಷರೂ. ಸಾಲ ನೀಡಲಾಗಿರುತ್ತದೆ.

ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದು, ಗ್ರಾಹಕರು ತಮ್ಮ ವ್ಯವಹಾರವನ್ನು ಯಾವುದೇ ಶಾಖೆಯಲ್ಲಿ ಬೇಕಾದರೂ ವ್ಯವಹಾರ ನಡೆಸಬಹುದು. ಆರ್‌ಟಿಜಿಸಿ, ನೆಫ್ಟ್, ಪಿಓಎಸ್, ಮೊಬೈಲ್ ಬ್ಯಾಂಕ್‌ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.