ಜಿಲ್ಲೆ

ಅವೈಜ್ಞಾನಿಕ ಮೋರಿಯಿಂದ ಬೆಳೆ ನಾಶ

Kolar

ನರಸಾಪುರ: ಕೆ.ಸಿ.ವ್ಯಾಲಿ ಯೋಜನೆಯನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರನ ಅವೈಜ್ಞಾನಿಕ ಯೋಜನೆಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರೈತರು ಬೆಳೆದ ತರಕಾರಿ ಹಾಗೂ ರಾಗಿ ಬೆಳೆ ನಷ್ಟವಾಗಿದೆ.

ನರಸಾಪುರದ ಕೋಡಿ ಕಾಲುವೆ ಬಳಿ ಗುತ್ತಿಗೆದಾರ ದೊಡ್ಡ ಪೈಪ್ ಹಾಕುವ ಬದಲು ಸಣ್ಣ ಪೈಪ್ ಹಾಕಿ ಮೋರಿ ನಿರ್ವಾಣ ವಾಡಿದ್ದಾರೆ. ಕಾಮಗಾರಿ ವೇಳೆ ರೈತರು ದೊಡ್ಡ ಪೈಪ್ ಹಾಕುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿ ಕಾಮಗಾರಿ ಪೂರ್ಣಗೊಳಿಸಿದ್ದರಿಂದ ಮಳೆಗಾಲದಲ್ಲಿ ಮೋರಿಯಲ್ಲಿ ನೀರು ಸರಾಗವಾಗಿ ಹರಿಯದೆ ತೋಟಗಳಿಗೆ ನುಗ್ಗಿ ಬೆಳೆ ನಷ್ಟವಾಗಿದೆ.

ಗುರುವಾರ ಸುರಿದ ಮಳೆಗೆ ಮೋರಿಯಲ್ಲಿ ನೀರು ಹರಿಯಲು ಸಾಧ್ಯವಾಗದೆ, ತೋಟಗಳಿಗೆ ಹರಿದಿದೆ. ಕೆ.ಸಿ. ವ್ಯಾಲಿ ಗುತ್ತಿಗೆದಾರ ವಾಡಿರುವ ಎಲ್ಲ ಕಾಮಗಾರಿ ಕಳಪೆಯಾಗಿದ್ದು, ಕಾಟಾಚಾರಕ್ಕೆ ಕಾಮಗಾರಿ ವಾಡಿದಂತಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರವಾಣ ಹೆಚ್ಚಿದರೆ ಮತ್ತೆ ತರಕಾರಿ ತೋಟ ಹಾಗೂ ರಾಗಿ ಬೆಳೆ ಮೇಲೆ ನೀರು ಹರಿಯುತ್ತಿದೆ.

ಶ್ರೀ ಈ ಸ್ಥಳದಲ್ಲಿ ದೊಡ್ಡ ಪೈಪ್ ಹಾಕಿ ಮೋರಿ ನಿರ್ವಾಣ ವಾಡಬೇಕು ಹಾಗೂ ಬೆಳೆ ನಷ್ಟವಾಗಿರುವ ರೈತರಿಗೆ ಗುತ್ತಿಗೆದಾರನಿಂದ ಬೆಳೆ ನಷ್ಟ ಪರಿಹಾರ ಕೊಡಿಸಬೇಕೆಂದು ರೈತರಾದ ಎನ್.ಕೆ.ಲೋಕೇಶ್, ಮಂಜುನಾಥ್, ರವಿಕುವಾರ್, ಗೋಪಾಲ್, ಮುನಿರಾಜು, ಪಿಳ್ಳಪ್ಪ , ಮಲ್ಲೇಶಪ್ಪ, ನಂಜಪ್ಪ, ಶಿವಕುವಾರ್ ಒತ್ತಾಯಿಸಿದ್ದಾರೆ.

ಕೆಸಿ ವ್ಯಾಲಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾಗಿ ಮೋರಿ ನಿರ್ವಾಣ ವಾಡದೆ ಪ್ರತಿ ವರ್ಷದ ಮಳೆಗಾಲದಲ್ಲಿ ನೀರು ತೋಟಗಳಿಗೆ ನೀರು ಹರಿಯುತ್ತಿದೆ. ತಕ್ಷಣ ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ಸಮಸ್ಯೆ ಬಗೆಹರಿಸಬೇಕು. ಮಂಜುನಾಥ್ ರೈತ ಕೆ.ಸಿ.ವ್ಯಾಲಿ ಯೋಜನೆಯ ಪ್ಲ್ಯಾನ್‌ನಲ್ಲಿ ಹಾಗೆ ಇರುವುದರಿಂದ ಅದರಂತೆಯೇ ನಿರ್ವಾಣ ವಾಡಲಾಗಿದೆ, ಸ್ಥಳಕ್ಕೆ ಬಂದು ಪರಿಶೀಲನೆ ವಾಡಲಾಗುವುದು. ಕೃಷ್ಣ, ಕೆಸಿ ವ್ಯಾಲಿ ಯೋಜನೆ ಇಂಜನಿಯರ್