ಜಿಲ್ಲೆ

ಅವಿರೋಧ ಆಯ್ಕೆ ಆದ್ಯತೆಯಾಗಿಲಿ

ಹುಕ್ಕೇರಿ: ಕೆಲವರ ಸ್ವಾರ್ಥದಿಂದ ನಡೆಯುವ ಚುನಾವಣೆ ಸಹಕಾರಿ ಸಂಘ-ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ, ಗ್ರಾಮದ ಗುರು-ಹಿರಿಯರ ಸಮ್ಮುಖದಲ್ಲಿ ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆ ನಡೆಯಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಗುಡಸ ಪಿಕೆಪಿಎಸ್ ಚುನಾವಣೆಯಲ್ಲಿ ಐದು ವರ್ಷದ ಅವಧಿಗೆ ಆಯ್ಕೆಯಾದ ನೂತನ ನಿರ್ದೇಶಕ ಮಂಡಳಿಯಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಹಕಾರಿಯಲ್ಲಿ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಮುಂದಿನ ಅವಧಿಯಲ್ಲಿ ರಾಜಕೀಯ ರಹಿತ ಆಡಳಿತ ಕೈಗೊಳ್ಳುವ ಮೂಲಕ ಸಹಕಾರಿ ಆರ್ಥಿಕತೆ ಹೆಚ್ಚಿಸೋಣ ಸಲಹೆ ನೀಡಿದರು.

ಗುಡಸ ಪ್ರಾಥಮಿಕ ಸಹಕಾರಿ ಸಂಘದ ಚುನಾವಣೆಯಲ್ಲಿ ಸದಾನಂದ ಹಿರೇಮಠ ನೇತೃತ್ವದ ಆಡಳಿತ ಮಂಡಳಿ ಸತತ ಮೂರನೇ ಬಾರಿ ಆಡಳಿತ ಚುಕ್ಕಾಣಿ ಹಿಡಿದಿದೆ. ಇವರ ವಿರುದ್ಧ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ನೇತೃತ್ವದ ಪೆನಲ್ ಪರಾಭವಗೊಂಡಿದೆ.

ಆಯ್ಕೆ: ಸದಾನಂದ ಹಿರೇಮಠ, ಅಡಿವೆಪ್ಪ ಮಗದುಮ್ಮ, ಶಿದಗೌಡ ಪಾಟೀಲ, ರಾಯಪ್ಪ ಡೂಗ, ಮಲ್ಲಿಕಾರ್ಜುನ ನರಸನ್ನವರ, ಬಾಬು ಜಾರಕಿಹೊಳಿ, ಅಲಗೌಡ ದೊಡದನ್ನವರ, ಮಲಗೌಡ ದೇಸಾಯಿ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಹೊಲೇರ (ಬಂಗಾರಿ) ಆಯ್ಕೆಗೊಂಡರು.

ಮುಖಂಡರಾದ ರಾಜಶೇಖರ ಕರೋಶಿ, ದಯಾನಂದ ಅಮ್ಮಣಗಿ, ಲಗಮಪ್ಪ ನಾಯಿಕ, ನಾಗಪ್ಪ ನಾಯಿಕ, ಕಾಡಗೌಡ ಪಾಟೀಲ, ಅಶೋಕ ವಾಡೇದಾರ, ಘಟಗೆಪ್ಪ ಪೋಕಳಿ,

ಗ್ಯಾನಪ್ಪ ಡೂಗ ಸೇರಿ ಗುಡಸ, ಕೊಟಬಾಗಿ, ಶಿರಢಾಣ ಮತ್ತು ಝಂಗಟಿಹಾಳ ಗ್ರಾಮದ ಪ್ರಮುಖರು ಇದ್ದರು.