ಹಾರೂಗೇರಿ: ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ೧೯೬೩ರಲ್ಲಿ ಪ್ರಾರಂಭಗೊಂಡ ಕಲ್ಲಪ್ಪಣ್ಣಾ ಅವಾಡೆ ಇಚಲಕರಂಜಿ ಜನತಾ ಸಹಕಾರಿ ಬ್ಯಾಂಕ್ ಮಹಾರಾಷ್ಟ್ರ-ಕರ್ನಾಟಕ ಸೇರಿ ೫೪ ಶಾಖೆ ತೆರೆದು ಜನರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಸ್ವಪ್ನಿಲ್‌ದಾದಾ ಆವಾಡೆ ಹೇಳಿದರು.
ಪಟ್ಟಣದ ಕರ್ನವಾಡಿ ಬಿಲ್ಡಿಂಗ್‌ನಲ್ಲಿ ಮಂಗಳವಾರ ಕಲ್ಲಪ್ಪಣ್ಣಾ ಆವಾಡೆ ಇಂಚಲಕರಂಜಿ ಜನತಾ ಸಹಕಾರಿ ಬ್ಯಾಂಕ್ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾಂಕ್ ಜತೆಗೆ ಗ್ರಾಹಕರು ಉತ್ತಮವಾಗಿ ಸಹಕರಿಸಬೇಕು. ಬ್ಯಾಂಕ್ ಇಲ್ಲಿನ ಜನರ ಮೆಚ್ಚುಗೆ ಪಡೆದು ವಿಶ್ವಾಸ ಗಳಿಸಲಿದೆ ಎಂದರು.
ಕಲ್ಲಪ್ಪಣ್ಣಾ ಆವಾಡೆ ಇಂಚಲಕರಂಜಿ ಜನತಾ ಸಹಕಾರಿ ಬ್ಯಾಂಕ್ ೫೪ನೇ ಶಾಖೆಯನ್ನು ಮಹಾರಾಷ್ಟ್ರ ಸ್ಟೇಟ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷೆ ವೈಶಾಲಿ ಆವಾಡೆ, ಕಿಶೋರಿ ಆವಾಡೆ ಉದ್ಘಾಟಿಸಿದರು.
ಸಂಜಯಕುಮಾರ ಅನಿಗೋಳ, ಚಂದ್ರಕಾಂತ ಚೌಗುಲಾ, ಜಿತೇಂದ್ರ ಕೆಮಲಾಪುರೆ, ಭೀಮಗೊಂಡ ಕರ್ನವಾಡಿ, ಸಿದ್ದಪ್ಪ ನಾಗನೂರು, ಗಿರೀಶ ದರೂರ, ಪ್ರಮತ್ ದಟವಾಡ, ಬಾಬುರಾವ್ ಹಳ್ಳೂರ, ಪ್ರಕಾಶ ಬದನೆಕಾಯಿ ಇತರರು ಇದ್ದರು.