ಜಿಲ್ಲೆ

ಅವಳಿ ನಗರದ ನಾಲಾ ಸ್ವಚ್ಛತೆಗೆ ಆದ್ಯತೆ

ಹುಬ್ಬಳ್ಳಿ: ಅವಳಿ ನಗರದಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವ ವಿಷಯ ಗೊತ್ತಿದೆ. ಈ ಮಳೆಗಾಲದಲ್ಲಿ ಅಂಥ ಅಪಾಯವನ್ನು ತಪ್ಪಿಸಲು ನಾಲಾ ಸ್ವಚ್ಛತೆ (ಹೂಳೆತ್ತುವ)ಗೆ ಆದ್ಯತೆ ನೀಡುವುದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಪಾಲಿಕೆ ಆಯುಕ್ತರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿ ನಗರದಲ್ಲಿ ನಿರಂತರ ನೀರು ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಕೆಲವಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದು ಗಮನಕ್ಕಿದೆ. ಜನತೆಗೆ ಕುಡಿಯುವ ನೀರಿನ ವಿಷಯದಲ್ಲಿ ಹೆಚ್ಚಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ಮನೆ ಮನೆಯಿಂದ ಕಸ ಸಂಗ್ರಹಿಸುವ ಪ್ರಮಾಣ ಶೇ. 76ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್​ಜಿಟಿ)ದ ರಾಜ್ಯ ಮಟ್ಟದ ಸಮಿತಿಯ ಮಾರ್ಗದರ್ಶನದಡಿ ನಗರ ಸೌಂದಯರ್ಿಕರಣಕ್ಕೆ ಹೆಚ್ಚು ಪ್ರಾಶಸ್ಱ ನೀಡಬೇಕಿದೆ. ಪೌರ ಕಾರ್ವಿುಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುವುದು ಎಂದು ಹೇಳಿದರು.

ಹು-ಧಾ ಅವಳಿ ನಗರದ ಎಲ್​ಇಡಿ ಬೀದಿ ದೀಪದ ವ್ಯವಸ್ಥೆಯ ಟೆಂಡರ್ ಬಗ್ಗೆ ಸೋಮವಾರ (ಜು. 10) ಬೆಂಗಳೂರಿನಲ್ಲಿ ಮಹತ್ವದ ಸಭೆ ಇದೆ. ಫುಟ್​ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಿಯಮಿತವಾಗಿ ನಡೆಸಲಾಗುವುದು ಎಂದರು.

ಗುರುವಾರದಂದು ಪಾಲಿಕೆ ಆಯುಕ್ತರಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿದ್ದ ವಾಕರಸಾ ಸಂಸ್ಥೆಯ ಎಂಡಿ ಭರತ್ ಎಸ್., ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾಗಿರುವ ಡಾ. ಈಶ್ವರ ಅವರು ಇಲ್ಲಿಗೆ ಬರುವ ಪೂರ್ವ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿದ್ದರು. ಶಿರಸಿ ಹಾಗೂ ಬೈಲಹೊಂಗಲ ಉಪ ವಿಭಾಗಾಧಿಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.