ಹಾವೇರಿ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಬದಲು ಸಿದ್ದರಾಮಯ್ಯ ಸರ್ಕಾರವಿದ್ದಿದ್ದರೆ ಜನರು ಮಣ್ಣು ತಿನ್ನಬೇಕಾಗುತ್ತಿತ್ತೇನೋ, ನಮ್ಮ ಸರ್ಕಾರದಲ್ಲಿ ಅಂತಹ ಯಾವುದೂ ಆಗುವುದಿಲ್ಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಜಿಎಸ್ಟಿ ಹಣ ಕೊಡದಿದ್ರೆ ಜನರು ಮಣ್ಣು ತಿನ್ನಬೇಕಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಬೊಮ್ಮಾಯಿ, ದೇಶಕ್ಕೆ ಕರೊನಾ ಬಂದಿದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಚರ್ಚೆ ಮಾಡಿದ್ದೇವೆ. ಅದು ಒಂದು ಹಂತಕ್ಕೆ ಬಂದಿದೆ. ರಾಜ್ಯಕ್ಕೆ ಬಡ್ಡಿ ಮತ್ತು ಅಸಲು ಭಾರ ಆಗುವುದಿಲ್ಲ ರಾಜ್ಯಕ್ಕೆ ಭಾರ ಆಗದಿರೋ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸೂಚಿಸಿದೆ. ಇವತ್ತು ಅಥವಾ ನಾಳೆ ಅದು ಲಿಖಿತ ರೂಪದಲ್ಲಿ ಬರುತ್ತದೆ. ನಂತರ ಸ್ಪಷ್ಟ ಅಭಿಪ್ರಾಯ ತಿಳಿಸುತ್ತೇವೆ. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲವನ್ನೂ ರ್ಚಚಿಸಲಾಗಿದೆ. ಸಿದ್ದರಾಮಯ್ಯ ಮುತ್ಸದ್ದಿ ರಾಜಕಾರಣಿ, ಅತಿಹೆಚ್ಚು ಬಜೆಟ್ ಮಂಡಿಸಿದ್ದಾರೆ. ಇದನ್ನು ಬಗೆಹರಿಸಲು ಪರಿಹಾರ ಹೇಳಬೇಕು. ರಾಜಕಾರಣ ಮಾಡಬಾರದು ಎಂದರು.
ವಾರ್ ಆನ್ ಡ್ರಗ್ ಡಿಕ್ಲೇರ್ಹ: ಲವು ವರ್ಷದಿಂದ ಡ್ರಗ್ಸ್ ಮಾಫಿಯಾಗೆ ಯಾವುದೇ ಸರ್ಕಾರಗಳು ಕ್ರಮ ತೆಗೆದುಕೊಂಡಿರಲಿಲ್ಲ. ನಾನು ವಾರ್ ಆನ್ ಡ್ರಗ್ ಡಿಕ್ಲೇರ್ ಮಾಡಿದ್ದೇನೆ. ಈ ಕಾರ್ಯಾಚರಣೆ ಇಲ್ಲಿಗೆ ನಿಲ್ಲೋದಿಲ್ಲ. ಡ್ರಗ್ಸ್ ನಾನಾ ರೂಪದಲ್ಲಿ ಬರುತ್ತಿವೆ. ಚಾಕ್ಲೇಟ್, ಸಣ್ಣಪೇಪರ್, ಟ್ಯಾಬ್ಲೆಟ್ ರೂಪದಲ್ಲಿ ಬರ್ತಿವೆ. ಎಲ್ಲವನ್ನೂ ನಿಯಂತ್ರಣ ಮಾಡೋ ರೂಪದಲ್ಲಿ ಜಾಲ ಬೀಸಿದ್ದೇವೆ. ವಿದೇಶಿಯರು ಇದರಲ್ಲಿ ತೊಡಗಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿ ಬೇರು ಸಮೇತ ಕಿತ್ತೆಸೆಯುತ್ತೇವೆ. ಶಾಲಾ, ಕಾಲೇಜ್ಗಳು ಆರಂಭವಾದ ಮೇಲೆ ಜಾಗೃತಿ ಆರಂಭಿಸಲಾಗುವುದು. ಯಾವುದೇ ಶಿಕ್ಷಣ ಸಂಸ್ಥೆ, ಹಾಸ್ಟೆಲ್ಗಳಲ್ಲಿ ಡ್ರಗ್ಸ್ ಸಿಕ್ರೆ ಅಲ್ಲಿನ ಮ್ಯಾನೇಜ್ವೆುಂಟ್ ಹೊಣೆಗಾರಿಕೆ ಮಾಡುತ್ತೇವೆ ಎಂದರು.