ಜಿಲ್ಲೆ

ಅವಧೂತರ ಪ್ರವಚನ, ಅಭಿನಂದನೆ 20ಕ್ಕೆ

ಬೀದರ್: ಶ್ರೀ ಬಸವಲಿಂಗ ಅವಧೂತರ ಸೇವಾ ಸಮಿತಿ ವತಿಯಿಂದ ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ಫೆ. 20 ರಂದು ಸಂಜೆ 6ಕ್ಕೆ ಪ್ರವಚನ ಹಾಗೂ ಅಭಿನಂದನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಪ್ರವಚನ ನೀಡುವರು. ಗ್ರಾಮದವರೇ ಆದ ತುಮಕೂರಿನ ಸಿದ್ಧಗಂಗಾ ಮಠದ ಸಂಘಸಿರಿ ಪ್ರಶಸ್ತಿ ಪುರಸ್ಕøತ ದೇವೇಂದ್ರ ಕರಂಜೆ ಅವರನ್ನು ಅಭಿನಂದಿಸಲಾಗುವುದು.
ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಬಸವಲಿಂಗ ಅವಧೂತರ ಸೇವಾ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.