filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಅಳಿವಿನಂಚಿನ ಪಕ್ಷಿಗಳ ರಕ್ಷಣೆಗೆ ಒತ್ತಾಯ

ಚಿತ್ರದುರ್ಗ: ಸರ್ಕಾರ ಅಳಿವಿನಂಚಿನಲ್ಲಿರುವ ಪಕ್ಷಿಗಳ ಬಗ್ಗೆ ಸಂಶೋಧನೆ ನಡೆಸಿ ರಕ್ಷಣೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಸಂಚಾಲಕ ಟಿ. ರುದ್ರಮುನಿ ಒತ್ತಾಯಿಸಿದರು.

ನಗರದ ಜೋಗಿಮಟ್ಟಿ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಕ್ಷಿಗಳ ದಿನಾಚರಣೆಯಲ್ಲಿ ಮಾತನಾಡಿದರು.

ಪಕ್ಷಿ ದಿನಾಚರಣೆ ಒಂದು ದಿನಕ್ಕೆ ಸೀಮಿತ ಆಗಬಾರದು. ಜನರು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ರುವ ಪಕ್ಷಿಗಳಿಗೆ ಆಹಾರ, ನೀರು ನೀಡುವ ಮೂಲಕ ರಕ್ಷಣೆ ಮಾಡಬೇಕು. ಪಕ್ಷಿಗಳ ಉಳಿವಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಜೋಗಿಮಟ್ಟಿ ಅರಣ್ಯಧಾಮದ ದೊಡ್ಡಣ್ಣನ ಕೆರೆ ಹೂಳೆತ್ತಿಸಿ ಅದರ ಸಂರಕ್ಷಣೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಎಲ್. ಪ್ರಶಾಂತ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಪರಿಸರ ಮತ್ತು ಪಕ್ಷಿ ಸಂಕುಲ ಉಳಿಸುವ ಕೆಲಸ ಆಗಬೇಕಿದೆ. ಕೆರೆ ಹೂಳೆತ್ತಿಸಿ ನೀರು ತುಂಬಿಸುವ ಕಾರ್ಯಕ್ಕೆ ಹೋರಾಟ ನಡೆಸುವುದು ಸ್ವಾಗತಾರ್ಹ ಎಂದು ಹೇಳಿದರು.

ಜಿಪಂ ಅಧಿಕಾರಿ ಸುಷ್ಮಾರಾಣಿ ಮಾತನಾಡಿ, 2002ರಲ್ಲಿ ಅಮೆರಿಕದ ಬಾರ್ನ್ ಫ್ರೀ ಯುಎಸ್‌ಎ ಮತ್ತು ಏವಿಯನ್ ವೆಲ್ಫೇರ್ ಒಕ್ಕೂಟದಿಂದ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಿ ದಿನ ಆಚರಿಸಲಾಯಿತು. ಅಮೆರಿಕಾದಲ್ಲಿ ಪಕ್ಷಿಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಕಂಡುಹಿಡಿಯುವುದು ಮತ್ತು ಪರಿಹಾರ ಒದಗಿಸುವುದು ಈ ದಿನದ ಮಹತ್ವವಾಗಿದೆ. ಜೋಗಿಮಟ್ಟಿಯ ಪಕ್ಷಿಗಳ ಕುರಿತು ಅಧ್ಯಯನವಾಗಬೇಕಿದೆ ಎಂದು ತಿಳಿಸಿದರು.

ಉಪನ್ಯಾಸಕ ಮಹೇಶ್, ರೋಟರಿ ಕ್ಲಬ್ ಅಧ್ಯಕ್ಷ ಚೇತನ ಬಾಬು, ಕೃಷಿ ಅಧಿಕಾರಿ ಗಿರೀಶ್ ಮಾತನಾಡಿದರು.

ರಾಜ್ಯ ಶಿಕ್ಷಣ ಪರಿಷತ್ ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್, ಜೋಗಿ ಜಾಡು ಬಳಗದ ಶ್ರೀನಿವಾಸ್, ಮಂಜು, ಸಂತೋಷ್, ನಟರಾಜ್, ವಾಯುವಿಹಾರಿಗಳು ಭಾಗವಹಿಸಿದ್ದರು.

ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ರಾಜ್ಯ ಶಿಕ್ಷಣ ಪರಿಷತ್ ಹಾಗೂ ಜೋಗಿ ಜಾಡು ತಂಡದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.