ಜಿಲ್ಲೆ

ಅಲ್ಲಮ ನಾಟಕ ಪ್ರದರ್ಶನ 29ರಂದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಡಿ. 29ರಂದು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಅಲ್ಲಮ-ಜಗದ ಜಂಗಮ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗರೇಖಾ ಕಲಾ ಬಳಗದ ಅಧ್ಯಕ್ಷ ಬಸವರಾಜ ಚಕ್ರಸಾಲಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿ ಸಾಧು ಕಠಾರೆ ನಾಟಕ ರಚಿಸಿದ್ದಾರೆ. ನಾನೇ ನಿರ್ದೇಶಿಸಿ ಅಲ್ಲಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಎರಡೂವರೆ ತಾಸಿನ ನಾಟಕದಲ್ಲಿ ಉತ್ತಮ ಸಂದೇಶ ಹಾಗೂ ರಾಗ ಸಂಯೋಜನೆ ಇದೆ. ಉಚಿತ ಪ್ರವೇಶವಿದೆ ಎಂದರು.

ಪತ್ರಕರ್ತ ಗಣಪತಿ ಗಂಗೊಳ್ಳಿ ಉದ್ಘಾಟಿಸುವರು. ಆವಾಸ ನಿರ್ಮಾಣ ಸಂಸ್ಥೆಯ ಮಂಜುನಾಥ ಕುರಹಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಬಸವರಾಜ ಐರಣಿ ಹಾಗೂ ಕವಿ ಸಾಧು ಕಠಾರೆ ಅವರನ್ನು ಸನ್ಮಾನಿಸಲಾಗುವುದು. ಬಳಗವು 17 ವರ್ಷಗಳಿಂದ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಕ್ಕೆ ಪ್ರಾಮುಖ್ಯತೆ ನೀಡುತ್ತ ಬಂದಿದೆ ಎಂದು ಹೇಳಿದರು.