ಬಳ್ಳಾರಿ: ನಗರದ ಅಲ್ಲಂಭವನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಜಯವಾಣಿ ದಿನಪತ್ರಿಕೆ ಸಹಯೋಗದೊಂದಿಗೆ ಜು.6 ಮತ್ತು 7 ರಂದು ಡಿಜೈರ್ ಫೆಸ್ಟ್ ಆಯೋಜಿಸಿದ್ದು, ವಿವಿಧ ರಾಜ್ಯಗಳ ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ಉದ್ಯಮಿ ವನಿತಾ ಅವರು ಮಂಡಲ ಆರ್ಟ್‌ನ ಕೈಯಿಂದ ತಯಾರಿಸಿದ ಉಡುಗೊರೆ ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ.
ಕೊಯಮತ್ತೂರಿನ ಕೀರ್ತಿ ಲಾಲ್ ಡೈಮೆಂಡ್ಸ್‌ಗಳ ಮಾರಾಟ ಮೇಳ ಆಯೋಜಿಸಿದ್ದು. ಖರೀದಿಯಲ್ಲಿ ಶೇ.15 ರಿಯಾಯಿತಿ ನೀಡಲಾಗುವುದು. ಅಲ್ಲದೆ ಕೊಲ್ಲಾಪುರಿಯ ಮಿಸಾಲ್ ಪಾವ್, ಸಾಬುದಾನ ವಡಾ, ಮೋದಕ, ಶ್ರೀಖಂಡ, ಬಕರವಾದ, ಬಾಡಂಗ, ಪಾನಿಪುರಿ ಹಾಗೂ ಪಾವ್‌ಬಾಜಿ ಅಡುಗೆಯ ತಿನಿಸುಗಳ ತಯಾರಿಸಲಾಗುತ್ತಿದ್ದು, ಆಹಾರ ಪ್ರಿಯರು ಹಣ ಪಾವತಿಸಿ ರುಚಿ ಸವಿಯಬಹುದು. ಜು.6ರಂದು ಸಂಜೆ 4 ಗಂಟೆಗೆ ಜೂನಿಯರ್ ಮಾಸ್ಟರ್ ಚೆಫ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಾದವರಿಗೆ ಮೊದಲ ಬಹುಮಾನ ಪ್ಯಾನಸೋನಿಕ್ ವ್ಯಾಕ್ಯೂಮ್ ಕ್ಲೀನರ್, ದ್ವಿತೀಯ ಎಲೆಕ್ಟಿಕಲ್ ರೈಸ್ ಕುಕ್ಕರ್ ವಿತರಿಸಲಾಗುತ್ತದೆ. ಜು.ಲೈ 7ರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮಾಸ್ಟರ್ ಚೆಫ್ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರಿಗೆ ಮೊದಲ ಬಹುಮಾನ ಪ್ಯಾನ್ ಸೋನಿಕ್ ವ್ಯಾಕ್ಯೂಂ ಕ್ಲೀನರ್, ಎರಡನೇ ಬಹುಮಾನ ಎಲೆಕ್ಟಿಕಲ್ ರೈಸ್ ಕುಕ್ಕರ್ ನೀಡಿ ಗೌರವಿಸಲಾಗುವುದು.