ನಿಪ್ಪಾಣಿ: ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಟ್ರ್ಯಾಕ್ಟರ್ ಖರೀದಿಸಲು ಮತ್ತು ಸ್ಥಳೀಯ ಕಬ್ಬು ಕಟಾವು ಮತ್ತು ಸಾಗಣೆ ತಂಡಗಳ ನಿರ್ಮಾಣಕ್ಕಾಗಿ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಬಡ್ಡಿರಹಿತ ೪ ಲಕ್ಷ ರೂ.ಗಳನ್ನು ಮುಂಗಡವಾಗಿ ಹಣದ ಸಹಾಯ ಮಾಡಲಾಗುತ್ತಿದೆ ಎಂದು ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ (ಮಲ್ಟಿಸ್ಟೇಟ್)ಯ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.
ಪಟ್ಟಣದ ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಟ್ರ್ಯಾಕ್ಟರ್ ಖರೀದಿ, ಕಬ್ಬು ಕಟಾವು ತಂಡ ನಿರ್ಮಿಸಲು ಮತ್ತು ಸಾಗಣೆ ಹತ್ತು ಹೊಸ ಗುತ್ತಿಗೆದಾರರಿಗೆ ಚೆಕ್ ವಿತರಿಸಿ ಮಾತನಾಡಿ, ಕಾರ್ಖಾನೆಯ ರೂವಾರಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆ ಅಲ್ಪಾವಽಯಲ್ಲಿಯೇ ಪ್ರಗತಿಪಥಕ್ಕೆ ಮರಳಿದೆ. ಕಬ್ಬುಕಟಾವು ಮತ್ತು ಸಾಗಣೆ ಗುತ್ತಿಗೆದಾರರ ಜತೆ ಒಪ್ಪಂದ ಮಾಡಿ ಮುಂಗಡ ಹಣ ನೀಡಲಾಗುತ್ತಿದೆ ಎಂದರು.
ಕಾರ್ಖಾನೆ ಉಪಾಧ್ಯಕ್ಷ ಪವನಕುಮಾರ ಪಾಟೀಲ ಮಾತನಾಡಿದರು.
ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ರಾಮಗೊಂಡ ಪಾಟೀಲ, ಜಯಕುಮಾರ ಖೋತ, ಜಯವಂತ ಭಾಟಲೆ, ರಾಜೇಂದ್ರ ಗುಂದೆಶಾ, ವಿನಾಯಕ ಪಾಟೀಲ, ರಮೇಶ ಪಾಟೀಲ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಸಾಸನೆ, ರಾವಸಾಹೇಬ ಫರಾಳೆ, ಮಿಥುನ ಪಾಟೀಲ, ಸರ್ಜೆರಾವ ಪಾಟೀಲ, ಯೂನುಸ್ ಮುಲ್ಲಾಣಿ, ಶ್ರೀಕಾಂತ ಕಣಗಲೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಪ್ರಧಾನ ವ್ಯವಸ್ಥಾಪಕ ಅನೀಲ ಪಾಟೀಲ ಇತರರಿದ್ದರು. ಸಂಚಾಲಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ಗಜಾನನ ರಾಮನಕಟ್ಟಿ ನಿರೂಪಿಸಿದರು. ಮುಖ್ಯ ಕಬ್ಬು ಅಭಿವೃದ್ಧಿ ಅಽಕಾರಿ ನಾಮದೇವ ಬನ್ನೆ ವಂದಿಸಿದರು.