ಜಿಲ್ಲೆ

ಅಲ್ಪಸಂಖ್ಯಾತರು ಹೆದರಬೇಡಿ: ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದ ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​

ತುಮಕೂರು: ಅಲ್ಪಸಂಖ್ಯಾತ ಸಮುದಾಯಕ್ಕೆ ಕಳೆದ ಏಳೆಂಟು ವರ್ಷದಿಂದ ಇರುಸು, ಮುರುಸು ಅನುಭವವಾಗಿದ್ದು, ಯಾರೂ ಹೆದರುವ ಅಗತ್ಯವಿಲ್ಲ, ಮುಂಬರುವ ದಿನದಲ್ಲಿ ಕಾಂಗ್ರೆಸ್​ ಅಧಿಕೇರಕ್ಕೇರಲಿದ್ದು ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ಹೇಳಿದರು.

ನಗರದ ಗಾಜಿನ ಮನೆಯಲ್ಲಿ ಭಾನುವಾರ ಕಾಂಗ್ರೆಸ್​ ವತಿಯಿಂದ ಆಯೋಜಿಸಿದ್ದ "ಅಲ್ಪಸಂಖ್ಯಾತರ ಸಮಾವೇಶ'ಮಾತನಾಡಿದ ಅವರು, ಕಾಂಗ್ರೆಸ್​ ಅಲ್ಪಸಂಖ್ಯಾತರ ಪರವಾಗಿದೆ, ಅಲ್ಪಸಂಖ್ಯಾತರು ಈ ದೇಶಕ್ಕಾಗಿದ್ದಾರೆ. ಬಸವಣ್ಣ, ಕನಕದಾಸರು, ಕುವೆಂಪು, ಶಿಶುನಾಳ ಷರ್​ೀ ಅವರು ಬಾಳಿದ ನಾಡಿನಲ್ಲಿ ಯಾರೂ ಹೆದರಬಾರದು ಎಂದರು.

ಬಿಜೆಪಿ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಲಾರಂಭಿಸಿದೆ, ಜನರು ಎಚ್ಚೆತ್ತುಕೊಂಡು ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ಉದಯಪುರದಲ್ಲಿ ನಡೆದ ಕಾಂಗ್ರೆಸ್​ ಸಭೆಯಲ್ಲಿ ಅಲ್ಪಸಂಖ್ಯಾತರ ರಣೆಗೆ ಮುಂದಾಗುವ ಸಂಕಲ್ಪ ಮಾಡಲಾಗಿದೆ, ಜನರೂ ಬದಲಾವಣೆ ಬಯಸುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್​ ಪರವಾದ ಅಲೆ ಸೃಷ್ಟಿಯಾಗುತ್ತಿದೆ ಎಂದರು.

ಅಲ್ಪಸಂಖ್ಯಾತರ ಟಕದ ರಾಜ್ಯಾಧ್ಯಕ್ಷ ಜಬ್ಬರ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​, ವಿಧಾನ ಪರಿಷತ್​ ಸದಸ್ಯ ನಸೀರ್​ ಅಹ್ಮದ್​, ರಾಜ್ಯಸಭಾ ಸದಸ್ಯ ನಾಜೀರ್​ಅಹಮದ್​, ಶಾಸಕರಾದ ವೆಂಕಟರಮಣಪ್ಪ, ಡಾ.ಎಚ್​.ಡಿ.ರಂಗನಾಥ್​ ಮತ್ತಿತರರ ಸ್ಥಳಿಯ ಮುಖಂಡರು ಇದ್ದರು.

ಧರ್ಮ&ಧರ್ಮಗಳ ನಡುವೆ ಗೋಡೆ ಕಟ್ಟುವ ಸಂ&ಪರಿವಾರ: ಡಿಕೆಶಿ ತೆರಳಿದ ನಂತರ ವೇದಿಕೆಗೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಮಾಜದಲ್ಲಿ ಧರ್ಮ&ಧರ್ಮಗಳ ನಡುವೆ ಗೋಡೆ ಕಟ್ಟುತ್ತಿರುವವರು ಸಂ, ಪರಿವಾರದವರು. ಇವರ ಕೈಗೆ ಅಧಿಕಾರ ಸಿಕ್ಕರೂ ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ ಎಂದು ಹರಿಹಾಯ್ದರು. ಸಂವಿಧಾನದ ಆಶಯಗಳ ರೀತಿಯಲ್ಲಿ ಅಧಿಕಾರ ನಡೆಸಬೇಕು, ನಾನು ಅಲ್ಪಸಂಖ್ಯಾತರ ಪರವಾಗಿ ಮಾತನಾಡಿದ್ದರೆ ಅದು ರಾಜಕೀಯ ಕಾರಣಕ್ಕಲ್ಲ, ನನಗೆ ನಾನು ಗೌರವಿಸುವ ಸಂವಿಧಾನ ತಿಳಿಸಿರುವ ಜವಾಬ್ದಾರಿ ಎಂದರು. ಆರ್​ಎಸ್​ಎಸ್​ ಜನ್ಮ ತಾಳಿ 87 ವರ್ಷವಾಗಿದೆ, ಅಂದಿನಿಂದಲೂ ಧರ್ಮ, ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕಲಸ ಮಾಡುತ್ತಿದೆ. ಹೆಡಗೆವಾರ್​, ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂ ಅಲ್ಲ, ನಾನು ಹಿಂದೂ, ನಾನು ಹಿಂದೂ ಆಗಿದ್ದಕ್ಕಾಗಿಯೇ ನಮ್ಮಪ್ಪ ನನಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟಿದ್ದಾರೆ, ನಾನು ನನ್ನ ಹಿಂದೂ ಧರ್ಮ ಪ್ರೀತಿಸಿದಷ್ಟೇ ಉಳಿದ ಧರ್ಮಗಳನ್ನೂ ಗೌರವಿಸುತ್ತೇನೆ ಎಂದರು. ಗೋಹತ್ಯೆ ನಿಷೇಧ ಕಾಯ್ದೆ ಹಿಂದೆಯೇ ಜಾರಿಯಾಗಿದ್ದರೂ ಅಲ್ಪಸಂಖ್ಯಾತರನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗ ತಿದ್ದುಪಡಿ ಮಾಡಿದರು, ಇಸ್ಲಾಂ ಧರ್ಮದವರಷ್ಟೇ ಇತರ ಧರ್ಮದಲ್ಲಿಯೂ ಗೋ ಮಾಂಸ ತಿನ್ನುವವರಿದ್ದಾರೆ, ಆಹಾರ ಅವರ ಇಷ್ಟ, ಪ್ರಶ್ನಿಸಲು ನಾವಾರು ಎಂದರು. ಎಂದೂ ಹಸು ಸಾಕದವರಿಂದ ನಾವು ಪಾಠ ಕಲಿಯಬೇಕಿಲ್ಲ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಹಿಂದೂ ಸಮಾಜದಲ್ಲಿ ಸಮಾನತೆ, ಅಸ್ಪೃಶ್ಯತೆ ಇರುವ ಕಾರಣಕ್ಕೆ ಅಂಬೇಡ್ಕರ್​ ಬೌದ್ಧ ಧರ್ಮಕ್ಕೆ ಮತಾಂತರವಾದರು ಎಂದರು.

ಕಾಂಗ್ರೆಸ್​ ಪರವಾಗಿರಿ: ಅಲ್ಪಸಂಖ್ಯಾತರ ವಿರುದ್ಧ ವಿಧಾನಸಭೆಯಲ್ಲಿ ಕಾಯ್ದೆ ಜಾರಿಯಾಗುವಾಗ ಜೆಡಿಎಸ್​ ವಿರೋಧ ಮಾಡಲಿಲ್ಲ, ಕಾಯ್ದೆ ಪರವಾಗಿ ಮತ ಚಲಾಯಿಸಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಜಾತ್ಯತಿತ ಎಂದು ಹೇಳಿದರೆ ನಂಬಬಾರದು. ಕಾಂಗ್ರೆಸ್​ ಮಾತ್ರ ಸಂವಿಧಾನ ಗೌರವಿಸುವ ಪವಾಗಿದ್ದು ನೀವು ಕಾಂಗ್ರೆಸ್​ ಪರವಾಗಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಸರ್ಕಾರ ಹಿಜಾಬ್​, ಹಲಾಲ್​, ಹಜಾನ್​ ಮೈಕ್​, ಜಾತ್ರೆಯಲ್ಲಿ ವ್ಯಾಪಾರದಂತಹ ವಿಷಯಗಳನ್ನು ಮುಂದೆ ಮಾಡಿ ಧಾರ್ಮಿಕವಾಗಿ ಜನರನ್ನು ಕೆರಳಿಸಿ ಸಮಾಜವನ್ನು ಹೊಡೆದು ಅವರ ಹುಳುಕು ಮುಚ್ಚಿಕೊಳ್ಳಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು. ಗೂಡ್ಸೆ ಹಿಂದೂವಾದವೂ ಬೇಡ, ಲಾಡನ್​ ಇಸ್ಲಾಂ ವಾದವೂ ಬೇಡ. ನಮ್ಮ ಸಂವಿಧಾನ ಹೇಳಿದಂತೆ ನಡೆದುಕೊಳ್ಳೋಣ ಎಂದು ಸಿದ್ದರಾಮಯ್ಯ ಹೇಳಿದರು.

ಟಿಪ್ಪು ಸುಲ್ತಾನ್​ ಸ್ವಾತಂತ್ರ$್ಯ ಹೋರಾಟಗಾರ ಎಂಬ ಕಾರಣಕ್ಕೆ ಅವರ ಜಯಂತಿ ಆಚರಣೆಗೆ ಜಾರಿಗೊಳಿಸಿದ್ದೆ, ಟಿಪ್ಪು ಮತಾಂಧ ಆಗಿದ್ದರೆ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡುತ್ತಿದ್ದರೇ? ಟಿಪ್ಪು ಒಬ್ಬ ಮಹಾನ್​ ದೇಶಭಕ್ತ ಎಂಬುದನ್ನು ಮರೆಯಬಾರದು, ಸಂ ಪರಿವಾರದ ಹುನ್ನಾರಗಳನ್ನು ಜನರು ಅರ್ಥಮಾಡಿಕೊಳ್ಳಬೇಕು. > ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ

ಜನರಿಲ್ಲದೆ ಸೊರಗಿದ ಸಮಾವೇಶ: ಸಮಾವೇಶದಲ್ಲಿ ರಾಜ್ಯದ ಟಾನುಟಿ ನಾಯಕರು ಭಾಗವಹಿಸಿದ್ದರೂ ನಿರೀತ ಮಟ್ಟದಲ್ಲಿ ಕಾರ್ಯಕರ್ತರು ಸುಳಿಯಲಿಲ್ಲ, ಖಾಲಿ ಖುರ್ಚಿಗಳಿಗೆ ವೇದಿಕೆಯಲ್ಲಿ ನಿಂತು ಭಾಷಣ ಮಾಡಬೇಕಾದ ಅನಿವಾರ್ಯತೆ ಮುಖಂಡರಿಗೆ ಸೃಷ್ಟಿಯಾಯಿತು. ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ತರಾತುರಿಯಲ್ಲಿ ಆಗಮಿಸಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬರುವ ಮುಂಚೆಯೇ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ತೆರೆಳಿದರು. ಕೆಲವು ಒಕ್ಕಲಿಗ ಮುಖಂಡರೂ ಡಿಕೆಶಿಯನ್ನು ಹಿಂಬಾಲಿಸಿದರು. ಡಿಕೆಶಿ ತೆರಳಿದ ಬೆನ್ನಹಿಂದೆಯೇ ಜನರೂ ಎದ್ದು ನಡೆಯಲು ಶುರುಮಾಡಿದ್ದು ಸಂಟಕರಿಗೆ ಇರಿಸು, ಮುರಿಸು ತರಿಸಿತು. ವಿಧಾನ ಪರಿಷಸ್​ ಸದಸ್ಯ ನಾಸಿರ್​ ಅಹ್ಮದ್​ ಸಿದ್ದರಾಮಯ್ಯ ಆಗಮಿಸುತ್ತಾರೆ, ಯಾರೂ ಹೋಗಬಾರದು ಎಂದು ಪದೇಪದೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

ತುಮಕೂರಿನಲ್ಲಿ ಕಾಂಗ್ರೆಸ್​ ಬೆಂಬಲಿಸುವ ದೊಡ್ಡ ಪಡೆಯೇ ಇದ್ದರೂ ಸಮಾವೇಶದಲ್ಲಿ ಭಾಗವಹಿಸದೆ ದೂರ ಉಳಿದಿರುವ ನಡೆಯ ಹಿಂದೆ, ನಗರ ಕ್ಷೇತ್ರದಲ್ಲಿಯೂ ಮುಸ್ಲಿಂ ಸಮುದಾಯದ ಮೂರು ಶಕ್ತಿ ಕೇಂದ್ರಗಳು ಉದಯವಾಗಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಜಿ ಶಾಸಕ ಡಾ.ರಫೀಕ್​ಅಹ್ಮದ್​, ಅಲ್ಪಸಂಖ್ಯಾತ ಟಕದ ಅಧ್ಯಕ್ಷ ಅತೀಕ್​ ಹಾಗೂ ಮುಖಂಡ ಇಕ್ಬಾಲ್​ ಸೇರಿಕೊಂಡು ಸಮಾವೇಶ ನಡೆಸಲು ಮುಂದಾಗಿದ್ದರೂ ಜನರನ್ನು ಕರೆತರುವಲ್ಲಿ ವಿಫಲವಾಗಿದ್ದು ಮುಂಬರುವ ಚುನಾವಣೆಯಲ್ಲಿಯೂ ಕಾಂಗ್ರೆಸ್​ಗೆ ಭಯ ಆರಂಭವಾಗುವಂತೆ ಮಾಡಿದೆ. ಮಾಜಿ ಶಾಸಕ ಡಾ.ರಫೀಕ್​ ಕೇಂದ್ರಿತವಾಗಿಯೇ ನಡೆಯುತ್ತಿರುವ ತುಮಕೂರು ನಗರದ ಕಾಂಗ್ರೆಸ್​ ಸಮಾವೇಶಗಳಂತೆ ಭಾನುವಾರ ನಡೆಯಲಿಲ್ಲ, ಅಲ್ಪಸಂಖ್ಯಾತ ಟಕದ ಅಧ್ಯಕ್ಷ ಅತೀಕ್​ ಹೆಸರನ್ನು ವೇದಿಕೆಯಲ್ಲಿ ಮುಖಂಡರು ಪದೇಪದೆ ಉಲ್ಲೇಖಿಸಿದ್ದು ಟಿಕೆಟ್​ ಬದಲಾವಣೆಯ ಸೂಚನೆ ಎಂಬಂತಿತ್ತು.