ಶಹಾಪುರÀ ನಗರದ ವಾರ್ಡ್ 19ರ ಹಳೆಪೇಟೆಯ ಅಲ್ಪಸಂಖ್ಯಾತ ಸಮುದಾಯ ಭವನದ ಸ್ಥಳವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು. ಚಾಂದಪಾಶಾ ಜುನೇದಿ, ಅಬ್ದುಲ್ ಭಾಜೆ ಜುನೇದಿ, ಅಬ್ದುಲ್ ಮಜೀದ್ ಇತರರಿದ್ದರು. 
ಜಿಲ್ಲೆ

ಅಲ್ಪಸಂಖ್ಯಾತ ಸಮುದಾಯ ಭವನಕ್ಕೆ ಅನುದಾನ

ಶಹಾಪುರ: ನಗರದ ವಾರ್ಡ್ 19ರ ಹಳೆಪೇಟೆಯ ಅಲ್ಪಸಂಖ್ಯಾತ ಸಮುದಾಯದ ಭವನಕ್ಕೆ ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ 25 ಲಕ್ಷ ಅನುದಾನ ನೀಡಲಾಗಿದ್ದು, ಹೆಚ್ಚಿನ ಕಾಮಗಾರಿಗೆ ಹಂತ, ಹಂತವಾಗಿ ಹಣ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭರವಸೆ ನೀಡಿದರು.

ಶುಕ್ರವಾರ ಸಮುದಾಯದ ಸ್ಥಳ ಪರಿಶೀಲಿಸಿದ ನಂತರ, ಮಹ್ಮದ್ ಹುಸೇನಿ ಮಸೀದಿ ಆವರಣದಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೀರು ಶುದ್ದೀಕರಣ ಘಟಕ ಸೇರಿ ಹಲವು ಅಗತ್ಯ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಯೋಜನೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ಲಾಲ್ ಅಹ್ಮದ್ ಖುರೇಶಿ ಬಡಾವಣೆಗೆ ಬೇಕಾದ ಕೆಲಸ, ಕಾರ್ಯಗಳ ಕುರಿತು ಮನವಿ ಸಲ್ಲಿಸಿದರು. ಯುವ ಮುಖಂಡ ನಯೀಮ್ ಅಫ್ಘಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಚಾಂದಪಾಶಾ ಜುನೇದಿ, ಅಬ್ದುಲ ಭಾಜೆ ಜುನೇದಿ, ಅಬ್ದುಲ್ ಮಜೀದ್, ಮತೀನ್, ಮುಜೀಬ್, ಮಹ್ಮದ್ ಸಾಲರ್, ಮುನ್ನಾ ಅನೂರಿ ಸೇರಿದಂತೆ ಇತರರಿದ್ದರು.